ಆಗಸ್ಟ್ 25, 2025 ರಂದು ಬೆಳಿಗ್ಗೆ ಸುಮಾರು 9.50 ಗಂಟೆಗೆ ಅರಸಿನಮಕ್ಕಿ ಪ್ರಜ್ಞಾ ಹೇರ್ ಡ್ರೆಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಜತ್ ಬಂಡಾರಿ ಎಂಬವರು ಹಲ್ಲೆಗೆ ಗುರಿಯಾದ ಘಟನೆ ನಡೆದಿದೆ.
ಮಾಹಿತಿಯಂತೆ, ಕಿರಣ್ ಶಿಶಿಲ ಎಂಬಾತನು KA21M5560 ನಂಬರಿನ ಕಾರಿನಲ್ಲಿ ಅಂಗಡಿಯ ಬಳಿ ಬಂದು, ಅಕ್ರಮವಾಗಿ ಅಂಗಡಿಗೆ ಪ್ರವೇಶಿಸಿ, ರಜತ್ ಬಂಡಾರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪಿರ್ಯಾದಿ ದಾಖಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 58/2025 ಅಡಿ ಕಲಂ 329(4), 352, 115(2), 351(2), 110 ಬಿಎನ್ಎಸ್-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
👉 ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಬಹಿರಂಗವಾಗಬೇಕಾಗಿದೆ.
Post a Comment