ಕುಕ್ಕೆಯಲ್ಲಿ ನಿರಂತರ ಸ್ವಚ್ಛತಾ ಅಭಿಯಾನ ಹಾಗೂ ಸಂದೇಶ ರವಾನೆ.

ಸುಬ್ರಹ್ಮಣ್ಯ ಆಗಸ್ಟ್ 10 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇಶಾದ್ಯಂತ ಸಾವಿರಾರು ಮಂದಿ ದಿನಂಪ್ರತಿ ದೇವರ ದರ್ಶನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಹೋಗುತ್ತಿರುತ್ತಾರೆ. ಆದರೆ ಸ್ವಚ್ಛತೆ ಬಗ್ಗೆ ಏನೆಂದು ಅರಿವಿಲ್ಲದಂತೆ ರಸ್ತೆ ಬದಿ,ಪಾರ್ಕಿಂಗ್ ಬದಿ, ಸಾನಘಟ್ಟದ ಬದಿ, ಅಂಗಡಿ ಮುಂಗಟುಗಳ ಬದಿಯಲ್ಲಿ,ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಂದರಲ್ಲಿ ಕಸ ಬಿಸಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.


ಪ್ರತಿ ರವಿವಾರ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾಕ್ಟರ್. ರವಿಕಕ್ಕೆ ಪದವು ಅವರ ನೇತೃತ್ವದಲ್ಲಿ ಸುಮಾರು 50 ಸ್ವಯಂ ಸೇವಕರ ತಂಡವು ಕಸ ಕಡ್ಡಿಗಳು, ಪ್ಲಾಸ್ಟಿಕ್ ಗ್ಲಾಸ್, ಬಾಟಲಿ, ಚೀಲ, ಹಾಗೂ ಕೊಚ್ಚಿ ಹಾಗೂ ಕಚ್ಚಾ ವಸ್ತುಗಳನ್ನ ಶೇಖರಿಸಿ ತ್ಯಾಜ್ಯ ಘಟಕಕ್ಕೆ ಸಾಗಿಸುತ್ತಿದ್ದಾರೆ .ಇಂದು ರವಿವಾರ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ವಾಯು ಸೇನಾಧಿಕಾರಿ ಸುಬ್ರಹ್ಮಣ್ಯ ಅತ್ಯಡಿ ಅವರು ಕ್ಷೇತ್ರಕ್ಕೆ ಬರುವಭಕ್ತಾದಿಗಳು ಹಾಗೂ ಸಾರ್ವಜನಿಕರಲ್ಲಿ ಎಲ್ಲೆಡೆ ಕಸ ಬಿಸಾಡದಂತೆ ಹಾಗೂ ಏನೇ ಪ್ಲಾಸ್ಟಿಕ್ ವಸ್ತುಗಳು ಕಸಗಳು ಇದ್ದಲ್ಲಿ ತಮ್ಮ ವಾಹನದಲ್ಲಿ ಇರಿಸಿ ಮತ್ತೆ ಅದನ್ನ ತಮ್ಮೂರಿಗೆ ಕೊಂಡು ಹೋಗಿ ತಾವು ಕುಕ್ಕೆ ಕ್ಷೇತ್ರದ ಪವಿತ್ರತೆಯನ್ನ ಕಾಪಾಡಬೇಕು ಎಂದು ಕರೆಕೊಟ್ಟರು.


 ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ದಂಡನೆ ಗೆ ಕ್ರಮ: ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವತಿಯಿಂದ ಇನ್ನು ಮುಂದೆ ಯಾರೇ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿದರು ದಂಡನೆ ವಿಧಿಸಲಾಗುವುದೆಂದು ತಿಳಿಸಿರುತ್ತಾರೆ . ಅಲ್ಲದೆ ಸ್ವಯಂಸೇವಕರು ಅಥವಾ ಸಾರ್ವಜನಿಕರು ಅಂತವರನ್ನು ಹಿಡಿದುಕೊಟ್ಟಲ್ಲಿ ಖಂಡಿತವಾಗಿಯೂ ದಂಡ ದಂಡಿಸಲಾಗುವುದು ಮಾತ್ರವಲ್ಲದೆ ಅಗತ್ಯ ಬಿದ್ದಲ್ಲಿ ಪೊಲೀಸ್ ಸ್ಟೇಷನ್ ಒಪ್ಪಿಸಲಾಗುವುದೆಂದು ತಿಳಿಸಿರುತ್ತಾರೆ.

Post a Comment

أحدث أقدم