ಸುಬ್ರಹ್ಮಣ್ಯ,ಆಗಸ್ಟ್ 5: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಟ್ಟದ ಸುಬ್ರಹ್ಮಣ್ಯ ಎನಕ್ಕಲ್ ಹಾಗೂ ಕುಲಕುಂದದ ಓಂ ಶ್ರೀ ಸಂಜೀವಿನಿ ಒಕ್ಕೂಟದ ವತಿಯಿಂದ ಏನೆಕಲ್ ನಲ್ಲಿ ಆಟಿ ಆಚರಣೆ ಕಾರ್ಯಕ್ರಮವನ್ನು ಮಂಗಳವಾರ ಏರ್ಪಡಿಸಲಾಯಿತು.
ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯ ಕ್ಷೇ ಸುಜಾತ ಕಲ್ಲಾಜೆ ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚೆನ್ನಮಣೆ ಆಟ ಆಡುವುದರ ಮೂಲಕ ಉದ್ಘಾಟಿಸಿದ ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಮಾತನಾಡಿ " ಆಟಿ ಆಚರಣೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಆಟಿ ತಿಂಗಳು ನಿರಂತರ ಮಳೆ ಸುರಿಯುತ್ತಿರುವುದರಿಂದ ಭೂಮಿಯು ತಂಪಾಗಿರುತ್ತದೆ.ಈ ತಿಂಗಳು ಕೃಷಿಕರಿಗೆ ಬಿಡುವಿನ ಕಾಲವಾದ್ದರಿಂದ ಆರ್ಥಿಕವಾಗಿಯೂ ಕಷ್ಟಕರವಾಗಿರುತ್ತದೆ.
ಆಟಿ ತಿಂಗಳು ನಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಕಷಾಯ ಹಾಗೂ ಆಟಿಯ ಔಷಧೀಯ ಗಿಡಮೂಲಿಕೆಗಳ ತಿಂಡಿ ತಿನಿಸುಗಳನ್ನ ತಿನ್ನುತ್ತಿದ್ದೇವೆ. ಗ್ರಾಮ ಹಾಗೂ ಊರಿನ ಎಲ್ಲ ಜನರು ಒಟ್ಟು ಸೇರಿ ಆಟಿ ಆಚರಣೆಯನ್ನ ಮಾಡುವುದರೊಂದಿಗೆ ನಮ್ಮ ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರ ಪರಂಪರೆಯನ್ನು ಉಳಿಸಿಕೊಂಡು ಮುಂದುವರಿಸಿ ಕೊಂಡು ಬರೋಣ" ಎಂದು ನುಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಭವ್ಯ ಜೇನುಕೊಡಿ, ಓಂ ಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೇ ಗುಣವತಿ, ತಾಲೂಕು ಬ್ಲಾಕ್ ಮ್ಯಾನೇಜರ್ ಮೋಹನ, ಭವ್ಯಶ್ರೀ ವಾರ್ಡ್ ಒಕ್ಕೂಟದ ಅಧ್ಯ ಕ್ಷೇ ವೇದಾವತಿ ಕಾರ್ಯದರ್ಶಿ ಸರಸ್ವತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಿಗೆ ಸಮೂಹ ಗೀತೆ ಹಾಗೂ ತಿಂಡಿ ತಿನಿಸುಗಳ ಸ್ಪರ್ಧೆಯನ್ನು ಏರ್ಪಡಿಸಲಾಯಿತು . ಸಮೂಹ ಗೀತೆಯಲ್ಲಿ ಪ್ರಥಮ ಯಶಸ್ವಿನಿ ಸಂಜೀವಿನಿ ಸಂಘ,ದ್ವಿತೀಯ ಅಮೃತ ಸಂಜೀವಿನಿ ಸಂಘ ತೃತೀಯ ಸೌಭಾಗ್ಯ ಸಂಜೀವಿನಿ ಸಂಘ ಬಹುಮಾನಗಳನ್ನ ಪಡೆದುಕೊಂಡರು. ಆಟಿ ತಿಂಗಳ ವಿಶೇಷ ಖಾದ್ಯಗಳಾದ ಪತ್ರೊಡೆ, ಆಟಿ ಪಾಯಸ, ತಜಂಕ್ ಚಟ್ನಿ,ಕೇಸು ದಂಟು ಪಲ್ಯ, ಕಿಸು ಎಲೆಪಲ್ಯ ಮೆಂತೆ ಮಣ್ಣಿ,ನೆನ್ನೆರಿ, ಕಣಿಲೆ ಪಲ್ಯ,ವಿಟಮಿನ್ ಸೊಪ್ಪು ಪಲ್ಯ, ಹಲಸಿನ ಬೀಜದ ಪಲ್ಯ, ಮುಂತಾದ 17 ಬಗೆಯ ತಿಂಡಿ ತಿನಿಸುಗಳನ್ನ ಪ್ರದರ್ಶಿಸಲಾಯಿತು. ಅದರಲ್ಲಿ ಪ್ರಥಮ ಸ್ಪಂದನ,ದ್ವಿತೀಯ ವೇದಾವತಿ ತೃತೀಯ ಸರಸ್ವತಿ,ಬಹುಮಾನಗಳನ್ನು ಪಡೆದರು. ಓಂ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಹೇಮಾವತಿ ನುಚಿಲ ಸ್ವಾಗತಿಸಿ ನಿರೂಪಿಸಿದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಕವಿತಾ ಧನ್ಯವಾದ ಸಮರ್ಪಿಸಿದರು.
إرسال تعليق