ಸುಬ್ರಹ್ಮಣ್ಯ ಅಂಚೆ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಸಾರ್ವಜನಿಕ ಸೇವೆ ಸ್ಥಗಿತ!

ಕುಕ್ಕೆ ಸುಬ್ರಹ್ಮಣ್ಯ: ಕಳೆದ ಎರಡು ವಾರಗಳಿಂದ ಕುಕ್ಕೆ ಸುಬ್ರಹ್ಮಣ್ಯ ಅಂಚೆ ಕಚೇರಿಯಲ್ಲಿ ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರ ಯಾವುದೇ ಕೆಲಸಗಳು ನಿರ್ವಹಣೆಯಾಗದೇ ವಿಳಂಬವಾಗುತ್ತಿವೆ. ಬೆಳಗ್ಗೆಿನಿಂದಲೇ ಅನೇಕ ಬಾರಿ ಅಂಚೆ ಕಚೇರಿಗೆ ಬರುವ ನಾಗರಿಕರು ಖಾಲಿಹಸ್ತದಿಂದ ಹಿಂದಿರುಗುವಂತಾಗಿದೆ.

ಪೋಸ್ಟ್ ಆರ್ಡರ್, ಮಾಹಿತಿ ಹಕ್ಕು ಅರ್ಜಿ, ನೋಂದಣಿ ಅಂಚೆ (Register Post) ಸೇರಿದಂತೆ ಯಾವುದೇ ಸೇವೆ ಸಿಗದೇ ಹೋದ ಪರಿಣಾಮ, ಸಾಮಾನ್ಯ ಜನ ಮಾತ್ರವಲ್ಲದೆ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಗಳಿಗೂ ತೊಂದರೆ ಉಂಟಾಗಿದೆ. “ಸರ್ವರ್ ಕಾರ್ಯನಿರ್ವಹಿಸುತ್ತಿಲ್ಲ” ಎಂಬುದೇ ಅಂಚೆ ಸಿಬ್ಬಂದಿಯ ಉತ್ತರವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊಬೈಲ್ ಮತ್ತು ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಅಂಚೆ ಸೇವೆಗಳು ಜೀವಂತವಾಗಿರಲು, ಸಮರ್ಪಕವಾದ ಇಂಟರ್ನೆಟ್ ಹಾಗೂ ನಿರಂತರವಾಗಿ ಕಾರ್ಯನಿರ್ವಹಿಸುವ ಸರ್ವರ್ ವ್ಯವಸ್ಥೆ ಅತ್ಯಗತ್ಯ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಅಮೂಲ್ಯ ಸಂಸ್ಥೆಯ ಮೇಲೆ ಜನರ ವಿಶ್ವಾಸ ಕುಂದುವ ಅಪಾಯವಿದೆ.

ಆದ್ದರಿಂದ, ಸಂಬಂಧಪಟ್ಟ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು, ಸಾರ್ವಜನಿಕರು ಯಾವುದೇ ವಿಳಂಬವಿಲ್ಲದೆ ತಮ್ಮ ಕೆಲಸಗಳನ್ನು ನೆರವೇರಿಸಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Post a Comment

أحدث أقدم