ಕೌಕ್ರಾಡಿ ಗ್ರಾಮ ಪಂಚಾಯತ್ ಹರ್-ಘರ್ ಸ್ವಚ್ಛತಾ ಕಾರ್ಯಕ್ರಮ..

ಕೌಕ್ರಾಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ, ಶೌರ್ಯ ವಿಪತ್ತು ಘಟಕ ನೆಲ್ಯಾಡಿ ವಲಯ ಮತ್ತು ಮಿಲನ ಸಂಜೀವಿನಿ ತಂಡಗಳ ಸಹಯೋಗದಲ್ಲಿ ಹರ್ ಘರ್ ಸ್ವಚ್ಚತಾ ಕಾರ್ಯಕ್ರಮದಡಿಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ಮುಂಬಾಗ ಮತ್ತು ಪೇಟೆಯ ಸುತ್ತ ಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ್ ಕುಮಾರ್ ಗೌಡ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವನಿತಾ ಎಂ, ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಾಲಿನಿ, ಕಾರ್ಯದರ್ಶಿ ಶ್ರೀಮತಿ ದೇವಿಕಾ ಶೌರ್ಯ ವಿಪತ್ತು ನಿರ್ವಹಣ ಘಟಕ ನೆಲ್ಯಾಡಿ ವಲಯದ ಘಟಕ ಪ್ರತಿನಿಧಿ ರಮೇಶ್ ಬಾಣಜಾಲು, ಸಂಯೋಜಕಿ ನಮಿತಾ ಶೆಟ್ಟಿ ಮತ್ತು ಶೌರ್ಯ ವಿಪತ್ತು ಘಟಕದ ಸದಸ್ಯರು,ಮಿಲನ ಸಂಜೀವಿನಿ ಎಂ.ಬಿ.ಕೆ ಸ್ವರ್ಣ ಲತಾ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪಾಲ್ಗೊಂಡರು.

Post a Comment

أحدث أقدم