ಕೌಕ್ರಾಡಿ ಪಟ್ಲಡ್ಕ ಶ್ರೀ ವರಲಕ್ಷ್ಮಿ ವೃತಾಚರಣ ಸಮಿತಿಯಿಂದ ವರಲಕ್ಷ್ಮಿ ಪೂಜೆ.

ಕೌಕ್ರಾಡಿ: ಕೌಕ್ರಾಡಿ ಗ್ರಾಮದ ಶ್ರೀ ಪಟ್ಲಡ್ಕ ಅದಿಮೊಗೇರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಶ್ರೀ ವರಲಕ್ಷ್ಮಿ ವೃತಾಚರಣ ಸಮಿತಿಯ ವತಿಯಿಂದ ಭಕ್ತಿಭಾವದಿಂದ ವರಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷೆ ಶ್ರೀಮತಿ ದೀಕ್ಷಾ ಸಾಲಿಯಾನ್ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಉಪನ್ಯಾಸವನ್ನು ಶ್ರೀಮತಿ ವಸಂತ ಲಕ್ಷ್ಮಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ನೆಲ್ಯಡ್ಕ, ಶ್ರೀಮತಿ ದೇವಿಕಾ ರಾಮನಾಥನ್, ಶ್ರೀಮತಿ ತಾರ, ಶ್ರೀಮತಿ ವಿಶಾಲಾಕ್ಷಿ ಅತಿಥಿಗಳಾಗಿ ಪಾಲ್ಗೊಂಡು ಶುಭಾಶಯ ಕೋರಿದರು.

ಪೂಜಾ ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ರೂಪವಾಗಿ ಸೀರೆಗಳನ್ನು ವಿತರಿಸಲಾಯಿತು. ಪಟ್ಲಡ್ಕ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಿದರು.

Post a Comment

أحدث أقدم