ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಕುಖ್ಯಾತ ಆರೊಪಿಗೆ ಉಪ್ಪಿನಂಗಡಿ ಪೊಲೀಸರಿಂದ ದಸ್ತಗಿರಿ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹಲವು ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡು 5 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಹಾಸನ ಮೂಲದ, ಪ್ರಸ್ತುತ ಮಂಗಳೂರಿನ ತಲಪಾಡಿಯಲ್ಲಿ ವಾಸವಿದ್ದ ಅಕ್ಬರ್ ಸೊಹೈಬ್ (24) ಎಂಬಾತನನ್ನು ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಕೌಶಿಕ್ ಅವರ ನೇತೃತ್ವದಲ್ಲಿ, chc-826 ಶಿವರಾಮ ರೈ, ಸಿಪಿಸಿ-2283 ಶ್ರೀಶೈಲ ಎಂ.ಕೆ, ಸಿಪಿಸಿ-2404 ಮೊಹಮ್ಮದ್ ಮೌಲನಾ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ತಂಡವು 04-08-2025 ರಂದು ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿ ಎಂಬಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಆತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾದ ಪ್ರಮುಖ ಪ್ರಕರಣಗಳು:

1. ಅ.ಕ್ರ: 98/2020, ಎಸ್.ಸಿ ಸಂಖ್ಯೆ: 5025/2021 – IPC ಸೆಕ್ಷನ್: 341, 392, 397, 511, 120(B)


2. ಅ.ಕ್ರ: 109/2020, ಸಿ.ಸಿ ಸಂಖ್ಯೆ: 276/2022 – IPC ಸೆಕ್ಷನ್: 457, 380, 34



ಇದೇ ಆರೊಪಿತನ ವಿರುದ್ಧದ ಇತರೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು:

ಬಂಟ್ವಾಳ ನಗರ ಠಾಣೆ:

ಅ.ಕ್ರ: 119/2020 – IPC ಸೆಕ್ಷನ್: 457, 380


ಉಳ್ಳಾಲ ಠಾಣೆ:

ಅ.ಕ್ರ: 01/2020 – IPC ಸೆಕ್ಷನ್: 454, 447, 380

ಅ.ಕ್ರ: 43/2020 – IPC ಸೆಕ್ಷನ್: 454, 457, 380

ಅ.ಕ್ರ: 20/2020 – IPC ಸೆಕ್ಷನ್: 454, 457, 380

ಅ.ಕ್ರ: 42/2020 – IPC ಸೆಕ್ಷನ್: 454, 457, 380 r/w 34


ಕೇರಳದ ಕನಪ್ಪುರಂ ಠಾಣೆ:

ಅ.ಕ್ರ: 348/2022 – IPC ಸೆಕ್ಷನ್: 380, 461, 457

ಈ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿದ್ದು, ಇದೀಗ ದಸ್ತಗಿರಿಯಾದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು.

– ಉಪ್ಪಿನಂಗಡಿ ಪೊಲೀಸ್ ಠಾಣೆ
(ಮಾಹಿತಿಗಾಗಿ)

Post a Comment

أحدث أقدم