ಉಪ್ಪಿನಂಗಡಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ತಾಲ್ಲೂಕು (ದ.ಕ.) ಹಾಗೂ ಪಿಎಂ ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ, ಉಪ್ಪಿನಂಗಡಿ ವಲಯ ಮಟ್ಟದ 14ರ ವಯೋಮಾನದ ಬಾಲಕ–ಬಾಲಕಿಯರ ವಾಲಿಬಾಲ್ ಪಂದ್ಯಾಟವು 14-08-2025 ಗುರುವಾರ, ಶಾಲಾ ಮೈದಾನದಲ್ಲಿ ಜರಗಿತು.


ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ದಿನಕರ್ ಕೆ.ಹೆಚ್. ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಲಾಂ ಬಿಲಾಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ಶ್ರೀ ಚಕ್ರಪಾಣಿ ಪಂದ್ಯಾಟದ ಅಂಕಣವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.


ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಇಕ್ಬಾಲ್, ಶ್ರೀ ಅಬ್ದುಲ್ ಜಬ್ಬಾರ್, ಶ್ರೀ ಬಾಲಕೃಷ್ಣ ಬಾಣಜಾಲು (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ), ಶ್ರೀಮತಿ ಉಷಾ ಅಂಚನ್ (ಮಾಜಿ ತಾಲೂಕು ಪಂಚಾಯತ್ ಸದಸ್ಯೆ), ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಬಾಲಕೃಷ್ಣ, ನೋಡಲ್ ಅಧಿಕಾರಿ ಶ್ರೀ ಕುಶಾಲಪ್ಪ, ಶ್ರೀ ಗಂಗಾಧರ, ಸಿಆರ್‌ಪಿ‌ಗಳಾದ ಶ್ರೀ ಪ್ರಕಾಶ್ ಬಾಕಿಲ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಇಸ್ಮಾಯಿಲ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ನಸೀಮ ಹಾಗೂ ಸದಸ್ಯರು, ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಜನಾರ್ಧನ, ಶಾಲಾ ಪಿಎಂ ಶ್ರೀ ದೈಹಿಕ ಶಿಕ್ಷಕರಾದ ಶ್ರೀ ಜಯಂತ್, ತಾಯಂದಿರ ಸಮಿತಿ, ಸುರಕ್ಷಾ ಸಮಿತಿ, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕ್ರೀಡಾಭಿಮಾನಿಗಳು ಹಾಜರಿದ್ದರು.


ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಶಾಲಾ ಮುಖ್ಯಗುರು ಶ್ರೀಮತಿ ವೀಣಾ ಮಸ್ಕರೇನಸ್ ಸ್ವಾಗತಿಸಿದರು. ಶ್ರೀಮತಿ ರತಿಲತಾ ಧನ್ಯವಾದ ಸಲ್ಲಿಸಿದರು. ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ವಿಮಲ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

أحدث أقدم