ಕುಕ್ಕೆ ಸುಬ್ರಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೆ ಒಳಪಟ್ಟ ವನದುರ್ಗ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂದು ಉತ್ಸವದ ಭಾವದಲ್ಲಿ ಪ್ರಾರಂಭವಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುಬ್ರಮಣ್ಯ ಮಠದ ಆಡಳಿತ ಅಧಿಕಾರಿ ಶ್ರೀ ಸುದರ್ಶನ ಜೋಯಿಸ್ ಅವರು ದೀಪ ಪ್ರಜ್ವಲಿಸಿ ನೆರವೇರಿಸಿದರು. ಸಂಜೆ 4:00 ರಿಂದ 6:00 ರವರೆಗೆ ಕುಕ್ಕೆ ಶ್ರೀ ದೇವಳದ ನೌಕರರ ವೃಂದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಭಕ್ತಿಗೀತೆಗಳ ರಸಸ್ವಾದ ಅನುಭವಿಸಿದರು.
ಸಂಜೆ 6:00 ರಿಂದ ಬೆಳ್ಳಾರೆ, ಕೈಕಂಬ, ಸುಬ್ರಹ್ಮಣ್ಯ ಡ್ಯಾನ್ಸ್ ಮತ್ತು ಬಿಟ್ಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮವು ನಡೆಯಿತು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸಿದ್ಧ ನಿರ್ದೇಶಕ ಜೀವನ ಬಳ್ಳಾರಿ ನಿರ್ದೇಶಿಸಿದರು.
ಅದೇ ರೀತಿ, ಶ್ರೀ ವನದುರ್ಗ ದೇವಿಗೆ ಶ್ರೀಕರ ಉಪಾಧ್ಯಾಯರು ವಿಶೇಷ ಅಲಂಕಾರ ಪೂಜೆ ಹಾಗೂ ದೀಪಾರಾಧನೆ ನಡೆಸಿ ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡಿದರು.
ನವರಾತ್ರಿ ಉತ್ಸವವು ಧಾರ್ಮಿಕ ಭಾವಪೂರ್ಣತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಕುಕ್ಕೆ ಮಹತ್ವವನ್ನು ಹೆಚ್ಚಿಸುವಂತೆ ಯಶಸ್ವಿಯಾಗಿ ನಡೆಯುತ್ತಿದೆ.
Post a Comment