ಉಪ್ಪಿನಂಗಡಿಯಲ್ಲಿ ವಿಷನ್ + ಆಪ್ಟಿಕಲ್ ಮತ್ತು ಐ ಕೇರ್ ಕೇಂದ್ರ ಸ,24 ರಂದು ಉದ್ಘಾಟನೆ ಗೊಳ್ಳಲಿದೆ.

ಉಪ್ಪಿನಂಗಡಿ: ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಸಿ.ಎ ಬ್ಯಾಂಕಿನ 2ನೇ ಮಹಡಿಯಲ್ಲಿ ನೇತ್ರ ತಜ್ಞ ರಕ್ಷಿತ್ ಪಿ. ಯನ್ ರವರ ಮಾಲೀಕತ್ವದ ವಿಷನ್ + ಆಪ್ಟಿಕಲ್ ಮತ್ತು ಐ ಕೇರ್ ಸೆಪ್ಟೆಂಬರ್ 24ರಂದು ಬೆಳಿಗ್ಗೆ 9.30ಕ್ಕೆ ಲೋಕಾರ್ಪಣೆ ಗೊಳ್ಳಲಿದೆ.

ಕಾರ್ಯಕ್ರಮವನ್ನು ವೈದ್ಯರಾದ ಡಾ. ಕೆ.ಜಿ. ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸಿ.ಎ ಬ್ಯಾಂಕಿನ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉದ್ಯಮಿಗಳಾದ ಸುಂದರ ಗೌಡ ಮತ್ತು ಸಚಿನ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಭಾಗವಹಿಸಲಿದ್ದಾರೆ.

 ನೇತ್ರ ತಜ್ಞ ಡಾ. ಸುಭಾಷ್ ಚಂದ್ರ ಹಾಗೂ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ಗೌರವ ಉಪಸ್ಥಿತರಿರಲಿದ್ದಾರೆ.

ಹೊಸತಾಗಿ ಉದ್ಘಾಟನೆಗೊಳ್ಳುವ ಈ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ನೇತ್ರ ಚಿಕಿತ್ಸಾ ಸೇವೆಗಳು ಲಭ್ಯವಾಗಲಿದ್ದು, ಜನರಿಗೆ ಉತ್ತಮ ಸೌಲಭ್ಯ ಒದಗಿಸುವ ವಿಶ್ವಾಸ ಹೊಂದಿದೆ.

👉 ಉಪ್ಪಿನಂಗಡಿಯಲ್ಲಿ ದೃಷ್ಟಿ ಹಾಗೂ ಕಣ್ಣಿನ ಆರೈಕೆಗೆ ಹೊಸ ದಿಕ್ಕು ತೋರಲಿರುವ ಈ ಕೇಂದ್ರವು ಜನತೆಗೆ ಆಶಾಕಿರಣವಾಗಿದೆ.


Post a Comment

Previous Post Next Post