ಸುಬ್ರಹ್ಮಣ್ಯ ಸೆಪ್ಟೆಂಬರ್ 24 : ಇಂದಿನ ದಿನಗಳಲ್ಲಿ ಮಹಿಳೆಯರು ಆಬಲೆಯರು ಅಲ್ಲ. ತಮ್ಮ ಸ್ವಂತ ದುಡಿಮೆಯೊಂದಿಗೆ ಸ್ವಾಲಂಬಿ ಬದುಕನ್ನ ಕಟ್ಟಿಕೊಳ್ಳಲು ಸಮರ್ಥರು. ತಾವು ಸ್ವತಹ ದುಡಿಯುವುದರೊಂದಿಗೆ ಇನ್ನಷ್ಟು ಜನ ಮಹಿಳೆಯರಿಗೆ ತರಬೇತಿ ನೀಡಿ ಸ್ವಂತ ಜೀವನವನ್ನು ಹಾಗೂ ಸ್ವಾವಲಂಬಿ ಬದುಕನ್ನ ನಡೆಸಲು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ" ಎಂದು ಸುಬ್ರಹ್ಮಣ್ಯದ ಶಿಕ್ಷಣ ತಜ್ಞ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನುಡಿದರು .ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಮೋoಟಿ ಕಂಪರ್ಟ್ ಪ್ರಥಮ ಮಹಡಿಯಲ್ಲಿ ಸೋಮವಾರ ಪಿಂಕಿ ಪ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಶುಭಾರಂಭಗೊಂಡಿತು.
ಶ್ರೀಮಂತಿ ಸುಮಿತ್ರ ಮುರಳಿ ಮಾಲಕತ್ವದ ಈ ಸೇವಾ ಸಂಸ್ಥೆಯನ್ನು ಸುಮಿತ್ರ ಅವರ ತಂದೆ ತಾಯಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರೊಂದಿಗೆ ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಾದವ ಶೆಟ್ಟಿಗಾರ್ ಹಾಗೂ ಸುಬ್ರಹ್ಮಣ್ಯದ ಆರ್. ಕೆ. ಟೈಲರ್ ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಕಿ ಶ್ರೀಮತಿ ಚಂಚಲಾಕ್ಷಿ,ಪ್ರತಿರೂಪ ಸ್ಟುಡಿಯೋ ಮಾಲಕ ಪ್ರಕಾಶ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಡ್ರೈವಿಂಗ್ ಸ್ಕೂಲ್ ಮಾಲಕ ಲl ದೇವರಗದ್ದೆ, ಸುಮಿತ್ರ ಅವರ ಸಂಬಂಧಿಕರು ಬಂಧು ಮಿತ್ರರು ಹಾಗೂ ಅಭಿಮಾನಿಗಳು ಹಾಜರಿದ್ದರು. ಕೊನೆಯಲ್ಲಿ ಮಾಧವ ದೇವರ ಗದ್ದೆ ಧನ್ಯವಾದ ಸಮರ್ಪಿಸಿದರು.
Post a Comment