ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋನೆಟ್ ಪೈಪ್ ಲೈನ್‌ನಿಂದ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಬಂಧನಕ್ಕೊಳಗಾಗಿದ್ದಾರೆ.
CR No.06/2010, ಕಲಂ 379 ಐಪಿಸಿ ಹಾಗೂ ಪೆಟ್ರೋನೆಟ್ ಕಾಯ್ದೆಯಡಿ ದಾಖಲಾಗಿದ್ದ CC No.1497/24 ಪ್ರಕರಣದ ಆರೋಪಿ ತಮ್ಮಯ್ಯ ಚಿಬಿದ್ರೆ ಎಂಬವರು, ದೀರ್ಘಕಾಲದಿಂದ ಕಾನೂನು ತಪ್ಪಿಸಿಕೊಂಡಿದ್ದರು.
👉 ದಿನಾಂಕ 28/09/2025 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಸಂದರ್ಭ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
👉 ಬಳಿಕ ದಿನಾಂಕ 29/09/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Post a Comment