🚨 ಆಂಬುಲೆನ್ಸ್ ಗೆ ಅಡ್ಡಿ – ಕಾರು ಮಾಲೀಕನಿಗೆ 6000 ರೂ. ದಂಡ 🚨

                     AI.. ಚಿತ್ರ 
ದಿನಾಂಕ 29-09-2025 ರಂದು ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಗುಂಡ್ಯ ಬಳಿ ತಲುಪಿದ ಸಂದರ್ಭದಲ್ಲಿ, ಮುಂಭಾಗದಿಂದ ಹೋಗುತ್ತಿದ್ದ ಕಾರು (ನಂ. KA-21-C-6687) ಆಂಬುಲೆನ್ಸ್‌ಗೆ ದಾರಿ ನೀಡದೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಆಂಬುಲೆನ್ಸ್ ಚಾಲಕ ಅನೀಫ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿ, ಕಾರು ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದು, ವಾಹನ ಸಂಚಾರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ₹6000 ದಂಡ ವಿಧಿಸಲಾಗಿದೆ.

ಪ್ರಾಣರಕ್ಷಣೆಯ ತುರ್ತುಸೇವೆಗಳನ್ನು ತಡೆದು ನಿಲ್ಲಿಸುವುದು ಕಾನೂನು ಅಪರಾಧವಾಗಿದ್ದು, ಸಾರ್ವಜನಿಕರು ಆಂಬುಲೆನ್ಸ್ ವಾಹನಗಳಿಗೆ ಸದಾ ಪ್ರಥಮ ಆದ್ಯತೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. 🚑

Post a Comment

Previous Post Next Post