ಮಂಗಳೂರು ನಗರದ ಕುದ್ರೋಳಿ ದಸರಾ 2025 ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ಸುಗಮತೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಅವರು ಹೀಗೆ ಸೂಚಿಸಿದ್ದಾರೆ:
ಮೆರವಣಿಗೆ ದಿನಾಂಕ ಮತ್ತು ಸಮಯ:
ದಿನಾಂಕ: 02-10-2025 ಸಂಜೆ 4:00 ಗಂಟೆಯಿಂದ 03-10-2025 ಬೆಳಿಗ್ಗೆ 6:00 ಗಂಟೆವರೆಗೆ
ಸ್ಥಳ: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ರಸ್ತೆ ಮೂಲಕ ಸುಂದರವಾಗಿ ಸಾಗುತ್ತದೆ.
ಮೆರವಣಿಗೆ ಮಾರ್ಗ:
ಕುದ್ರೋಳಿ ದೇವಸ್ಥಾನದ ದ್ವಾರ → ದುರ್ಗಾಮಹಲ್ ಜಂಕ್ಷನ್ → ಮಣ್ಣಗುಡ್ಡೆ ಜಂಕ್ಷನ್ → ನಾರಾಯಣಗುರು ವೃತ್ತ → ಲಾಲ್‌ಭಾಗ್ → ಬಳ್ಳಾಲ್ ಭಾಗ್ → ಕೊಡಿಯಲ್ ಗುತ್ತು ಜಂಕ್ಷನ್ → ಬಿ.ಜಿ.ಸ್ಕೂಲ್ ಜಂಕ್ಷನ್ → ಪಿ.ವಿ.ಎಸ್. ಜಂಕ್ಷನ್ → ನವಭಾರತ್ ವೃತ್ತ → ಬಿಷಪ್ ಹೌಸ್ → ಸಿಟಿ ಸೆಂಟರ್ → ಹಂಪನಕಟ್ಟೆ → ಕೆಬಿ ಕಟ್ಟೆ → ಸಾಫ್ರಾನ್ ಹೊಟೇಲ್ → ಟೆಂಪಲ್ ಸ್ಕ್ವೆರ್ → ಕಾರ್ ಸ್ಟ್ರೀಟ್ → ಬಾಲಾಜಿ ಜಂಕ್ಷನ್ → ನ್ಯೂಚಿತ್ರಾ ಜಂಕ್ಷನ್ → ಅಳಕೆ ಬ್ರಿಡ್ಜ್ → ಕುದ್ರೋಳಿ ದ್ವಾರ.
ಸಾರಿಗೆ ಮಾರ್ಪಾಡುಗಳು:
ಕೋಟ್ಟಾರ ಚೌಕಿ → ಲೇಡಿಹಿಲ್ ಮುಖಾಂತರ ನಗರದ ಕಡೆಗೆ ಬರುವ ವಾಹನಗಳು: ಕುಂಟಿಕಾನ – ಕೆಪಿಟಿ – ನಂತೂರು ಮುಖಾಂತರ ಸಂಚರಿಸಬೇಕು.
ಬಂಟ್ಸ್ ಹಾಸ್ಟೆಲ್ → ಪಿವಿಎಸ್ ಮುಖಾಂತರ ಎಂ.ಜಿ. ರಸ್ತೆ: ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಮಲ್ಲಿಕಟ್ಟೆ ಮೂಲಕ ಸಂಚರಿಸಬೇಕು.
ಕೆ.ಎಸ್.ಆರ್.ಟಿ.ಸಿ ಜಂಕ್ಷನ್ → ಲಾಲ್‌ಭಾಗ್: ಕೆ.ಎಸ್.ಆರ್.ಟಿ.ಸಿ ಜಂಕ್ಷನ್ – ಕಾಪಿಕಾಡ್ – ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಾಗಬೇಕು.
ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನ್ → ಕಾಪಿಕಾಡ್ – ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುತ್ತವೆ.
ಹಂಪನಕಟ್ಟೆ → ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್: ಹಂಪನಕಟ್ಟೆ – ಎಲ್.ಹೆಚ್.ಹೆಚ್ – ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸಬೇಕು.
ನ್ಯೂಚಿತ್ರಾ ಜಂಕ್ಷನ್ → ನವಭಾರತ್: ಬದಲಿ ಮಾರ್ಗ ಬಳಸಿ ಸಾಗಬೇಕು.
ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ → ಮಣ್ಣಗುಡ್ಡೆ ಜಂಕ್ಷನ್ → ದುರ್ಗಾಮಹಲ್ → ಕುದ್ರೋಳಿ ದೇವಸ್ಥಾನ: ಬದಲಿ ಮಾರ್ಗ ಬಳಸಿ ಸಾಗಬೇಕು.
ಸಾರ್ವಜನಿಕರಿಗೆ ನಿಗಧಿಪಡಿಸಿದ ಪಾರ್ಕಿಂಗ್ ಸ್ಥಳಗಳು:
ಕರಾವಳಿ ಮೈದಾನ ಪಾರ್ಕಿಂಗ್
ಅಳಕೆ ಮಾರ್ಕೆಟ್ ಪಾರ್ಕಿಂಗ್
ಉರ್ವ ಮಾರ್ಕೆಟ್ ಮೈದಾನ
ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
ಪೊಂಪೈ ಚರ್ಚ್ ಪಾರ್ಕಿಂಗ್
ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್
ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್
ಬಿ.ಇ.ಎಂ. ಸ್ಕೂಲ್ ಪಾರ್ಕಿಂಗ್
ಸರ್ಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್
ಹೊಟೇಲ್ ವಿಮಲೇಶ್ ಪಾರ್ಕಿಂಗ್
ಸಾರ್ವಜನಿಕರಿಗೆ ಸೂಚನೆ:
ವಾಹನಗಳನ್ನು ನಿಗದಿಪಡಿಸಿದ ಪಾರ್ಕಿಂಗ್‌ಗಳಲ್ಲಿ ನಿಲ್ಲಿಸಿ, ಮೆರವಣಿಗೆಯ ಮಾರ್ಗದಲ್ಲಿ ವಾಹನ ನಿಲ್ಲಿಸಬೇಡಿ.
ಪರ್ಯಾಯ ಮಾರ್ಗಗಳನ್ನು ಅನುಸರಿಸಿ, ಸಂಚಾರ ನಿಯಮ ಪಾಲನೆ ಮಾಡಿ.
ಸಾರ್ವಜನಿಕರು ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ವಿನಂತಿ.
“Follow traffic rules, Save Lives”
ಜಾರಿಗೆ ತಂದವರು:
ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರ, ಮಂಗಳೂರು ನಗರ ಪೊಲೀಸ್
Post a Comment