ಹೊಸಮಜಲು ಅಶ್ವಥ ಗೆಳೆಯರ ಬಳಗ (ರಿ) ಕೌಕ್ರಾಡಿ ವತಿಯಿಂದ 2025 ನೇ ಸಾಲಿನ ಗಣೇಶೋತ್ಸವದ ಜಮಾಬಂದಿ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಆಗಸ್ಟ್ 31 ರಂದು ಸಂಘದ ಅಧ್ಯಕ್ಷರಾದ ವಂದನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಘ ಭವನದಲ್ಲಿ ಜರುಗಿತು.
ಈ ಸಂದರ್ಭ ನೂತನ ಪದಾಧಿಕಾರಿಗಳಾಗಿ –
ಉಪಾಧ್ಯಕ್ಷ : ಶ್ರೀ ಸಂತೋಷ್ ಕಲಾಯಿ
ಕಾರ್ಯದರ್ಶಿ : ಶ್ರೀ ಶೈಲೇಶ್ ಹೆಗ್ಡೆ
ಸಹ ಕಾರ್ಯದರ್ಶಿ : ಶ್ರೀ ರಂಜಿತ್ ಮಂಚಿ
ಕೋಶಾಧಿಕಾರಿ : ಶ್ರೀ ಪ್ರಜ್ವಲ್ ಬಿ.
ಗೌರವಾಧ್ಯಕ್ಷ : ಶ್ರೀ ಬಾಲಕೃಷ್ಣ ಬಾಣಜಾಲು
ಇವರುಗಳನ್ನೆಲ್ಲಾ ಸರ್ವಾನುಮತದಿಂದ ಆಯ್ಕೆ ಮಾಡಿ ಸಭೆಯಲ್ಲಿ ಅಭಿನಂದಿಸಲಾಯಿತು.
ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಮೆಚ್ಚುಗೆ ಪಡೆದಿರುವ ಅಶ್ವಥ ಗೆಳೆಯರ ಬಳಗ, ಇತ್ತೀಚಿನ ವರ್ಷಗಳಲ್ಲಿ ನೆಲ್ಯಾಡಿಯ ಗಣೇಶೋತ್ಸವದ ಸಂದರ್ಭದಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ಟ್ಯಾಬ್ಲೋಗಳನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟ ಗುರುತಿಸಿಕೊಂಡಿದೆ.
Post a Comment