ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪಿರ್ಯಾದಿದಾರ ರಂಗನಾಥ ಬೆಳ್ಳಾಲ (ಗ್ರಾಮ ಕುಂದಾಪುರ ತಾಲೂಕು) ಅವರು ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯದಲ್ಲಿ, ಅವರ ಕಿಸೆಯಲ್ಲಿದ್ದ ರೂ.50,000/- ಮೌಲ್ಯದ ಎರಡು ಕಟ್ಟನ್ನು ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿದ ಪ್ರಕರಣ ದಾಖಲಾಯಿತು.
ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು, ಆರೋಪಿತ ನಜೀರ್ (55 ವರ್ಷ), ಚಾವಕ್ಕಾಡು ಗ್ರಾಮ, ತ್ರಿಶೂರ್ ಜಿಲ್ಲೆ, ಕೇರಳ ರಾಜ್ಯ ಮೂಲದವನನ್ನು ದಿನಾಂಕ 19.09.2025ರಂದು ಮಂಗಳೂರಿನ ಹಂಪನಕಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡರು. ಆರೋಪಿಯಿಂದ ಕಳ್ಳತನವಾದ ಹಣದಲ್ಲಿ ರೂ.22,000/- ಸ್ವಾಧೀನಪಡಿಸಿಕೊಂಡಿದ್ದಾರೆ.
ನಂತರ, ಆರೋಪಿಯನ್ನು ದಿನಾಂಕ 20.09.2025ರಂದು ಬಂಟ್ವಾಳ ಏ.ಸಿ.ಜೆ ಮತ್ತು ಜೆ.ಎಂ.ಏಪ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
👉 ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Post a Comment