ಸುಬ್ರಹ್ಮಣ್ಯ: ನದಿ ಪೂಜನ ಕಾರ್ಯಕ್ರಮ.

ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಇಂದು (ಸೆ.22) ಸುಬ್ರಹ್ಮಣ್ಯ ಕುಮಾರಧಾರ ನದಿಯ ತೀರದಲ್ಲಿ ನದಿ ಪೂಜನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಶೇಷಪ್ಪ ಅಜಿಲ ಕೋಟೆ ಬೈಲು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಬಳಿಕ ಶ್ರೀವಲ್ಲಿ ಭಜನಾ ತಂಡ ಸುಬ್ರಹ್ಮಣ್ಯ ಹಾಗೂ ಸುಖಪ್ರದ ಭಜನಾ ತಂಡ ಸುಬ್ರಹ್ಮಣ್ಯ ತಂಡದ ಸದಸ್ಯರು ಭಕ್ತಿಗೀತೆಗಳ ಭಜನಾ ಕಾರ್ಯಕ್ರಮವನ್ನು ನೆರವೇರಿಸಿ ಭಕ್ತರ ಮನಸ್ಸನ್ನು ಆನಂದಭರಿತಗೊಳಿಸಿದರು.

ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಅವರು ನದಿ ಪೂಜನದ ಮಹತ್ವ, ಪರಿಸರ ಸಂರಕ್ಷಣೆಯ ಅಗತ್ಯ ಹಾಗೂ ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿವಕುಮಾರ್ ಹೊಸೋಳಿಕೆ, ಅಶೋಕ್ ಮೂಲೆಮಜಲು, ಅಚ್ಚುತ ಗೌಡ, ಡಾ. ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಧನಂಜಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನದಿ ಪೂಜನದ ಅಗತ್ಯತೆಯನ್ನು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ನದಿಯಲ್ಲಿ ಬಾಗಿನ ಬಿಡುವ ಮೂಲಕ ಅಧಿಪೂಜನ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಗ್ರಾಮ ಪಂಚಾಯಿತಿಯ ಸದಸ್ಯರು, ಸ್ಥಳೀಯ ಸೊಸೈಟಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಮಲೆನಾಡು ಹಿತರಕ್ಷಣಾ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪೈಲಾಜೆಯ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಆಚಾರ್ಯ ನಿರೂಪಿಸಿದರು. "ವಂದೇ ಮಾತರಂ" ಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿದ್ದು, ಜಯಪ್ರಕಾಶ್ ಕೂಜು ಗೋಡು ಧನ್ಯವಾದ ಸಲ್ಲಿಸಿದರು.

ಈ ನದಿ ಪೂಜನ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಮಾಸ್ಟರ್ ಪ್ಲಾನ್ ಸದಸ್ಯರೂ ಭಾಗಿಯಾಗಿದ್ದರು. ✅

Post a Comment

Previous Post Next Post