ಮುಂಬೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಮಾರಾಟ – 6 ಮಂದಿ ಆರೋಪಿಗಳ ಬಂಧನ.

ಮಂಗಳೂರು:ಮುಂಬೈನಿಂದ ಮಾದಕ ವಸ್ತುಗಳನ್ನು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸರು ಪತ್ತೆ ಹಚ್ಚಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.

👉 ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್‌ನಲ್ಲಿ 21-09-2025ರಂದು ಬೆಳಿಗ್ಗೆ ದಾಳಿ ನಡೆಸಿದ ವೇಳೆ ಇಬ್ಬರು ಯುವಕರು 111.83 ಗ್ರಾಂ ಎಂಡಿಎಂಎ (ಮೌಲ್ಯ ರೂ. 22.30 ಲಕ್ಷ) ವಶಕ್ಕೆ ಸಿಕ್ಕಿದ್ದು, ಆರೋಪಿ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ ಸೋಜಾ ಬಂಧಿತರಾಗಿದ್ದಾರೆ. ವಿಚಾರಣೆಯಲ್ಲಿ ಮುಂಬೈನ ಆಫ್ರಿಕನ್ ಪ್ರಜೆ ಬೆಂಜಮಿನ್‌ನಿಂದ ಮಾದಕ ವಸ್ತು ಖರೀದಿ ಮಾಡಿರುವುದು ಹಾಗೂ ಕೇರಳದ ಅಬ್ದುಲ್ ಕರೀಂ ಹಣ ಒದಗಿಸಿದ್ದಾನೆಂಬುದು ಬಹಿರಂಗವಾಗಿದೆ. ಈ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಯಿತು.

👉 ಅದೇ ದಿನ ರಾತ್ರಿ ಮಣ್ಣಗುಡ್ಡೆಯ ಸೆಂಟ್ರಲ್ ವೇರ್‌ಹೌಸ್ ಬಳಿ ಮತ್ತೊಂದು ದಾಳಿ ನಡೆಸಿದ ಪೊಲೀಸರು 21.03 ಗ್ರಾಂ ಕೊಕೇನ್ (ಮೌಲ್ಯ ರೂ. 1.90 ಲಕ್ಷ) ವಶಕ್ಕೆ ಪಡೆದು, ಆರೋಪಿಗಳಾದ ಜನನ್ @ ಜನನ್ ಜಗನ್ನಾಥ, ರಾಜೇಶ್ ಬಂಗೇರ ಹಾಗೂ ವರುಣ್ ಗಾಣಿಗರನ್ನು ಬಂಧಿಸಿದ್ದಾರೆ. ಈ ಪ್ರಕರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಂಧಿತರ ವಿವರಗಳು:

1. ಚಿರಾಗ್ ಸನಿಲ್ – ಕಾವೂರು


2. ಆಲ್ವಿನ್ ಕ್ಲಿಂಟನ್ ಡಿ ಸೋಜಾ – ಅಶೋಕನಗರ


3. ಅಬ್ದುಲ್ ಕರೀಂ ಇ.ಕೆ (52) – ಕೇರಳ, ಮಲ್ಲಾಪ್ಪುರಂ ಜಿಲ್ಲೆ


4. ಜನನ್ ಜಗನ್ನಾಥ (28) – ಕುಲಶೇಖರ, ಮಂಗಳೂರು


5. ರಾಜೇಶ್ ಬಂಗೇರ (30) – ಬೋಳೂರು, ಮಂಗಳೂರು


6. ವರುಣ್ ಗಾಣಿಗ (28) – ಅಶೋಕನಗರ, ಮಂಗಳೂರು



ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾದಕ ವಸ್ತು ಪೆಡ್ಲರ್ಗಳ ಜಾಲ ಹಾಗೂ ಬಳಸುವವರ ಕುರಿತು ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Post a Comment

Previous Post Next Post