ಕುಕ್ಕೆ ಸುಬ್ರಹ್ಮಣ್ಯ;ಕುಕ್ಕೆ, ದಕ್ಷಿಣ ಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿತ್ಯಕ್ರಮದ ಕಾರ್ಯಗಳು ಹಾಗೂ ವಿದ್ಯಾಸಂಸ್ಥೆಗಳ ನಿರ್ವಹಣೆಯಲ್ಲಿ ತುರ್ತು ಸಮಸ್ಯೆಗಳು ಎದುರಾಗಿದ್ದು, ಧಾರ್ಮಿಕ ನಂಬಿಕೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹಾನಿ ಉಂಟಾಗಿದೆ ಎಂದು ದೇವಸ್ಥಾನದ ಕಡಬ ಕೆ.ಡಿ.ಪಿ.ಸದಸ್ಯ ಶಿವರಾಮ ರೈ ಹೇಳಿದ್ದಾರೆ.
ತುರ್ತು ಮನವಿ ಮೂಲಕ, ಅವರು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗರೆಡ್ಡಿ ಅವರ ಗಮನಕ್ಕೆ ತರುವಂತೆ, ದೇವಸ್ಥಾನದ ಬಜೆಟ್ ಕಡತಗಳು ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಮಂಜೂರಾತಿಗಾಗಿ ನಿಲ್ಲಿಸಿರುವುದರಿಂದ ಕಳೆದ ಒಂದು ವರ್ಷದ ಬಜೆಟ್‌ನ ಹಣಕಾಸು ಖರ್ಚು ಸಾಧ್ಯವಾಗುತ್ತಿಲ್ಲ. ಇದರಿಂದ ದೇವಳದ ವಿವಿಧ ವಿದ್ಯಾಸಂಸ್ಥೆಗಳ ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ.
ಇದರ ಜೊತೆಗೆ, ತೆಂಗಿನಕಾಯಿ ಸರಬರಾಜು ವಿಳಂಬದಿಂದ ಪೂಜೆಗಳು ತಾತ್ಕಾಲಿಕವಾಗಿ ಬಜಾರಿನಿಂದ ಖರೀದಿಸಿದ ತೆಂಗಿನಕಾಯಿಯಿಂದ ನಡೆಸಲಾಗುತ್ತಿದೆ. ಆದರೆ ಮುಂದೆ ತೆಂಗಿನಕಾಯಿ ಕೊರತೆ ಎದುರಾಗುವ ಭೀತಿ ಇದೆ. ಶಿವರಾಮ ರೈ ಅವರು ಸಮಗ್ರ ಪರಿಶೀಲನೆ ನಡೆಸಿ ಸಂಬಂಧಿತ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.
ದೆವಳದ ಕಾರ್ಯನಿರ್ವಹಣೆಯಲ್ಲಿ ಈ ರೀತಿಯ ತೊಂದರೆಗಳು ಮುಂದುವರಿದರೆ ಧಾರ್ಮಿಕ ಆಚರಣೆ ಮತ್ತು ಶಿಕ್ಷಣ ವ್ಯವಸ್ಥೆ ಮೇಲೆ ಹಾನಿ ಉಂಟಾಗುವ ಆತಂಕ ವ್ಯಕ್ತವಾಗಿದೆ. ಶಿಸ್ತು ಕ್ರಮವನ್ನೂ ಉಲ್ಲೇಖಿಸುತ್ತ ಅವರು ಸಮಸ್ಯೆ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Post a Comment