ಸುಬ್ರಹ್ಮಣ್ಯ ಸೆಪ್ಟೆಂಬರ್ 27 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯಕ್ರಮ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಶನಿವಾರ ಸುಬ್ರಹ್ಮಣ್ಯದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಬಾಲಕಿಯರ ಹಾಸ್ಟೆಲಿನ ಸುಮಾರು 60 ಕ್ಕು ಮಿಕ್ಕಿ ವಿದ್ಯಾರ್ಥಿನಿಯರು, ಹಾಸ್ಟೆಲ್ ವಾರ್ಡನ್, ಸಹಾಯಕಿಯರು, ಅಡುಗೆಯವರು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಸ್ವಚ್ಛದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಕಾಶಿ ಕಟ್ಟೆ ಬಳಿ ಇರುವ ಬಾಲಕಿಯರ ಹಾಸ್ಟೆಲ್ ಪರಿಸರವು ತುಂಬಾ ಕಸ ಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಆವರಿತವಾಗಿದ್ದು ಅದನ್ನು ಇಂದು ಸತ್ಯಗೊಳಿಸಲಾಯಿತು.
ಸುಬ್ರಹ್ಮಣ್ಯ ಹಿಂದುಳಿದ ವರ್ಗಗಳ ಹಾಸ್ಟೆಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ.
Newspad
0
Tags
ಕುಕ್ಕೆ ಸುಬ್ರಹ್ಮಣ್ಯ
Premium By
Raushan Design With
Shroff Templates
Post a Comment