ಗುಡ್ರಮಲ್ಲೇಶ್ವರ ದೇವಸ್ಥಾನ, ಗುಡ್ರಾಡಿ (ರಖ್ಯಾ) ಇಲ್ಲಿ ನಡೆದ ಮುಕ್ತ ನೃತ್ಯ ಸ್ಪರ್ಧೆಯಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ಸಾಂಸ್ಕೃತಿಕ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ಹೆಮ್ಮೆ ತಂದಿದೆ.
ಸಮೂಹ ನೃತ್ಯ ತಂಡದಲ್ಲಿ ಚೈತನ್ಯ ಎನ್.ಎಸ್., ಧೃತಿ ರೈ, ರಕ್ಷಾ ಪಿ., ಬೃಂದಾ ಸಿ.ವಿ., ಕೃತಿಕಾ ಬಿ.ಎಲ್., ಜೀತಶ್ರೀ, ಚೇತನ್, ಲತಾ, ಸುಪ್ರಿಯಾ, ಜನನಿ ಮತ್ತು ನಿಶ್ಚಿತ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ತೋರಿಸಿದರು.
ಈ ತಂಡದ ಮಾರ್ಗದರ್ಶನವನ್ನು ಕಾಲೇಜಿನ ಸಾಂಸ್ಕೃತಿಕ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ ವಹಿಸಿದ್ದರು. ವಿಜೇತ ತಂಡವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ. ಅಭಿನಂದಿಸಿ, ಮುಂದಿನ ಸಾಧನೆಗಳಿಗೆ ಹಾರೈಸಿದರು.
Post a Comment