ಬೆಥನಿ ಐಟಿಐಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ನೆಲ್ಯಾಡಿ:ಮೇಜರ್ ಧ್ಯಾನ್‌ಚಂದ್ ರವರ ನೆನಪಿನಾರ್ಥ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಭಾನುವಾರ ಭಾವಪೂರ್ಣವಾಗಿ ಆಚರಿಸಲಾಯಿತು.

ಸಂಸ್ಥೆಯ ಕ್ರೀಡಾ ವಿಭಾಗದ ಸಂತೋಷ್ ಪಿಂಟೋ ಮತ್ತು ವಿನ್ಸೆಂಟ್ ಸಿ.ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಸುಮಾರು ಎರಡು ಕಿಲೋಮೀಟರ್ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.

ಈ ಓಟದಲ್ಲಿ ಸೃಜನ (ಪ್ರಥಮ), ಲವನೀಶ (ದ್ವಿತೀಯ), ಸ್ವಸ್ಥಿಕ್ ಕೆ.ಎಸ್ (ತೃತೀಯ) ಹಾಗೂ ಸುಧರ್ಷನ್ ಎ.ಆರ್ (ನಾಲ್ಕನೇ) ಸ್ಥಾನಗಳನ್ನು ಪಡೆದು ಮೆರೆದರು. ವಿಜೇತರಿಗೆ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ವತಿಯಿಂದ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯ ಸಜಿ ಕೆ. ತೋಮಸ್, ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ Snr ಪಿಪಿಎಫ್ ಪ್ರಕಾಶ್ ಕೆ.ವೈ, ತರಬೇತಿ ಅಧಿಕಾರಿ ಜೋನ್ ಪಿ.ಎಸ್, ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

👉 ಕ್ರೀಡಾ ದಿನಾಚರಣೆಯು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಆರೋಗ್ಯ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವಂತಾಯಿತು.

Post a Comment

أحدث أقدم