ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿ: ಶಿಕ್ಷಕ-ರಕ್ಷಕ ಸಂಘ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ.

ನೆಲ್ಯಾಡಿ: ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ 24 ಸೆಪ್ಟೆಂಬರ್ 2025 ರಂದು ಬುಧವಾರದಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಸಿದ್ದು, ಅವರು ಸಂಘದ ಮಹತ್ವ ಮತ್ತು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾತನಾಡಿದರು.

ಸಭೆಯು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ 2024-2025 ಸಾಲಿನ ಲೆಕ್ಕ ಪತ್ರವನ್ನು ಶ್ರೀಮತಿ ವೆರೋನಿಕಾ ಪ್ರಭಾ, ಖಜಾಂಚಿ ಮಂಡಿಸಿದರು, ಮತ್ತು ಸಭೆಯು ಅದನ್ನು ಅನುಮೋದಿಸಿತು.

ಪೋಷಕರ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಈ ಸಾಲಿನ ಪೋಷಕರ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶ್ರೀ ಉಮ್ಮರ್ ಬೈಲಂಗಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಅಶ್ವಿತಾ ರೈ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸೇಸಮ್ಮ, ಸದಸ್ಯರಾಗಿ ಶ್ರೀ ಧನಂಜಯ್, ಶ್ರೀ ಲಿಂಗಪ್ಪ ಗೌಡ, ಉಮ್ಮರ್ ನುಸ್ಲಿಯಾರ್ ಆಯ್ಕೆಯಾಗಿದರು. ನೂತನ ಪದಾಧಿಕಾರಿಗಳಿಗೆ ಹೂ ನೀಡುವ ಮೂಲಕ ಸಂಯೋಜಕರು ಸ್ವಾಗತಿಸಿದರು.

ಪೂರ್ವ ಪದಾಧಿಕಾರಿಗಳು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಹೊಸ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ. ಸೀತಾರಾಮ್ ಪಿ ನಡೆಸಿದರು. ನೂತನ ಮತ್ತು ಪೂರ್ವ ಪದಾಧಿಕಾರಿಗಳು ಹಾಗೂ ಪೋಷಕರು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಿದರು.

ನೂತನ ಕಾರ್ಯಾಧ್ಯಕ್ಷ ಉಮ್ಮರ್ ಬೈಲಂಗಡಿ, ಕಾಲೇಜಿನ ಉಳಿವಿನ ಅಗತ್ಯತೆ ಮತ್ತು ಮಹತ್ವವನ್ನು ವ್ಯಕ್ತಪಡಿಸಿ, ಈ ಸಂಬಂಧಿತ ಪ್ರಯತ್ನಗಳನ್ನು ಮುಂದುವರೆಸುವ ಮೂಲಕ ಶ್ರಮಿಸಬೇಕೆಂದು ಹೇಳಿದರು. ಶಿಕ್ಷಕ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ನಿಶ್ಮಿತಾ ನಿರೂಪಿಸಿದರು. ಸಭೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

Previous Post Next Post