ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಇಂಜಾಡಿ,ಕಲ್ಲಪಣೆ ಭಾಗದಲ್ಲಿ ಸ್ವಚ್ಛತಾ ಕಾರ್ಯ.

ಪಾನ್ ಬೀಡ ಸಿಗರೇಟ್ ಬಿಡಿ ಮಾರಾಟಗಾರರಿಗೆ ದಂಡನೆ:ಕುಕ್ಕೆಯಲ್ಲಿ ಸಂಪೂರ್ಣ ನಿಷೇಧಕ್ಕೆ ಸ್ಥಳಿಯಾಡಳಿತ ಸಂಕಲ್ಪ..

 ಸುಬ್ರಹ್ಮಣ್ಯ ಸೆಪ್ಟೆಂಬರ್ 26: ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ ಪಾಕ್ಷಿಕ-2025ರ ಅಭಿಯಾನ ಕಾರ್ಯಕ್ರಮದಡಿಯಲ್ಲಿ 10ನೇ ದಿನವಾದ ಇಂದಿನ ದಿನ ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮದ ಇಂಜಾಡಿ-ಕಲ್ಲಪಣೆಯಿಂದ ಮುಂದುವರಿದು ಸವಾರಿ ಮಂಟಪದಲ್ಲಿನ ಸೇತುವೆವರೆಗಿನ ಲೋಕೋಪಯೋಗಿ ಮುಖ್ಯ ರಸ್ತೆಯ ಬದಿಗಳಲ್ಲಿ ಹಾಗೂ ಅದರ ಸುತ್ತಮುತ್ತಲಿನ ವಠಾರವನ್ನು ಸಾಮೂಹಿಕ ಸ್ವಚ್ಛತಾ

 ಶ್ರಮದಾನದ ಮೂಲಕ ಶುಚಿತ್ವಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರು-ಸದಸ್ಯರುಗಳು-ಪಂಚಾಯತ್ ಅಭಿವೃದ್ಧಿ ಅಧಿಕಾರಿ-ಕಾರ್ಯದರ್ಶಿ-ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಬ್ರಹ್ಮಣ್ಯ ಇದರ ಸೇವಾಧೀಕ್ಷಿತೆ, ಕುಕ್ಕೆ ಶ್ರೀ ಜೆ ಸಿ ಸುಬ್ರಹ್ಮಣ್ಯ ಇದರ ನಿಕಟ ಪೂರ್ವ ಅಧ್ಯಕ್ಷರು, ಸುಬ್ರಹ್ಮಣ್ಯದ ಅಂಗಡಿ ಮಳಿಗೆಗಳ ಮಾಲಕರುಗಳು,ವ್ಯಾಪಾರಸ್ಥರು,ಮತ್ತು ಸುಬ್ರಹ್ಮಣ್ಯ ಘನ ತ್ಯಾಜ್ಯ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರು ಹಾಗೂ ಇತರರು ಭಾಗವಹಿಸಿ ಸ್ವಚ್ಛ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿರುತ್ತಾರೆ
 ದಂಡನೆ : ಸುಬ್ರಹ್ಮಣ್ಯದ ಇಂಜಾಡಿ ಬಳಿ ಅನಧಿಕೃತ ಗೂಡಂಗಡಿಯಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ತಂಬಾಕುಯುಕ್ತ ಬೀಡಾ ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಂಡು ರೂ.2000.00(ರೂಪಾಯಿ ಎರಡು ಸಾವಿರ) ದಂಡನೆಯನ್ನೂ ವಿಧಿಸಿ ಮುನ್ನೆಚ್ಚರಿಕೆಯನ್ನು ನೀಡಲಾಯಿತು.ಈ ಮೂಲಕ ತಂಬಾಕು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸ್ಥಳಿಯಾಡಳಿತ ಶಪಥ ಮಾಡಿದೆ

Post a Comment

Previous Post Next Post