ನೆಲ್ಯಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.


ನೆಲ್ಯಾಡಿ
:ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ, ಅಶ್ವಿನಿ ಆಸ್ಪತ್ರೆ ಹಾಗೂ ಎ.ಜೆ. ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆಪ್ಟೆಂಬರ್ 11ರಂದು ನಡೆಯಲಿದೆ.

ಶಿಬಿರವು ನೆಲ್ಯಾಡಿ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಲಿದ್ದು, ತಜ್ಞ ವೈದ್ಯರ ತಂಡದಿಂದ ವಿವಿಧ ತಪಾಸಣೆಗಳು ನೆರವೇರಲಿದೆ.

ಶಿಬಿರದಲ್ಲಿ ಸಾಮಾನ್ಯ ತಪಾಸಣೆ ಜೊತೆಗೆ

ಎಲುಬು ಮತ್ತು ಕೀಲು ತಜ್ಞರು
ಕಣ್ಣಿನ ತಜ್ಞರು
ಕಿವಿ, ಮೂಗು, ಗಂಟಲು ತಪಾಸಣೆ
ಹೃದಯ ತಪಾಸಣೆ
ಚರ್ಮ ರೋಗ ತಪಾಸಣೆ
ಮೂತ್ರ ರೋಗ ತಪಾಸಣೆ
ಮಕ್ಕಳ ತಜ್ಞರ ಸೇವೆ

ಎಂಬ ಸೇವೆಗಳು ಲಭ್ಯವಿರಲಿವೆ.

ಈ ಕುರಿತು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಾಜಾಲ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ದಯಾಕರ ರೈ ಮಾಹಿತಿ ನೀಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ.

Post a Comment

أحدث أقدم