ಮಂಗಳೂರು: 20 ಲಕ್ಷದ ಕಳವು ಪ್ರಕರಣ – 20 ಗಂಟೆಯೊಳಗೆ ಇಬ್ಬರು ಅಂತರಾಜ್ಯ ಕಳ್ಳರ ಬಂಧನ, ಚಿನ್ನಾಭರಣ-ನಗದು ವಶ.

ಮಂಗಳೂರು ನಗರ: ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭಾರೀ ಕಳ್ಳತನ ಪ್ರಕರಣವನ್ನು ಉರ್ವಾ ಪೊಲೀಸ್ ಠಾಣೆಯವರು ಕೇವಲ 20 ಗಂಟೆಗಳೊಳಗೆ ಪತ್ತೆಹಚ್ಚಿದ್ದಾರೆ. ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ:
ದಿನಾಂಕ 19/20 ಅಕ್ಟೋಬರ್‌ 2025ರ ಮಧ್ಯರಾತ್ರಿಯಲ್ಲಿ ಉರ್ವಾ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ, ಲಾಲ್ ಬಾಗ್ ಹ್ಯಾಟ್ ಹಿಲ್‌ನ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ಗಳಲ್ಲಿ ಕಳ್ಳರು ನುಗ್ಗಿ, ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ರೂ. 5000 ನಗದು, 3000 ದಿರ್ಹಮ್ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದಿದ್ದರು. ಈ ಕುರಿತು ಶ್ರೀ ರಿಯಾಜ್ ರಶೀದ್ ಅವರಿಂದ ನೀಡಿದ ದೂರಿನ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಕೇಸ್ ನಂ. 104/2025, ಕಲಂ 331(4), 305(ಎ), ಬಿ.ಎನ್.ಎಸ್ - 2023).

ತ್ವರಿತ ತನಿಖೆ ಮತ್ತು ಬಂಧನ:
ದೂರು ದಾಖಲಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರ್ವಾ ಠಾಣೆಯ ಪೊಲೀಸರು, ಶ್ವಾನ ದಳ ಮತ್ತು ಫಿಂಗರ್‌ಪ್ರಿಂಟ್ ತಜ್ಞರ ಸಹಾಯದಿಂದ ತನಿಖೆ ಕೈಗೊಂಡು, ಕೇವಲ 20 ಗಂಟೆಗಳೊಳಗೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಬೆಂಗಳೂರಿನಲ್ಲಿ ಬಂಧಿಸಿದರು.
ಬಂಧಿತರಿಂದ ಎಲ್ಲಾ ಕಳ್ಳತನದ ಚಿನ್ನಾಭರಣ, ರೂ. 5000 ನಗದು, 3000 ದಿರ್ಹಮ್ (ಸುಮಾರು ₹70,000 ಮೌಲ್ಯ) ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಬಂಧಿತರ ವಿವರ:

1. ಅಭಿಜಿತ್ ದಾಸ್ (24) – ತಂದೆ ರವೀಂದೋ ದಾಸ್, ಪಾಂಚಗೋರಿ, ಅಂಬಿಕಾ ಪುರ್ ಪಾರ್ಟ್ 10, ಕಾಚಾರ್ ಜಿಲ್ಲೆ, ಅಸ್ಸಾಂ ರಾಜ್ಯ.


2. ದೇಬಾ ದಾಸ್ (21) – ತಂದೆ ದಿಲಿಪ್ ಕುಮಾರ್ ದಾಸ್, ಮೆಹೆರ್ ಪುರ್ ಗ್ರಾಮ, ಕಾಚಾರ್ ಜಿಲ್ಲೆ, ಅಸ್ಸಾಂ ರಾಜ್ಯ.

ಬಂಧಿತ ಅಭಿಜಿತ್ ದಾಸ್ ವಿರುದ್ಧ ಬೆಂಗಳೂರಿನಲ್ಲೂ ಸೇರಿದಂತೆ ಅಸ್ಸಾಂ ರಾಜ್ಯದಲ್ಲಿಯೂ ಅನೇಕ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಮುಂದಿನ ಕ್ರಮ:
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇವರು ಇತರೆ ಕಳವು ಪ್ರಕರಣಗಳಿಗೂ ಸಂಬಂಧ ಹೊಂದಿರಬಹುದೆಂಬ ಅನುಮಾನದಿಂದ ತನಿಖೆ ಮುಂದುವರಿದಿದೆ.

ಪೊಲೀಸರ ಶ್ಲಾಘನೀಯ ಕಾರ್ಯಾಚರಣೆ:
ಡಿಸಿಪಿ (Crime) ರವರ ಮೇಲ್ವಿಚಾರಣೆಯಲ್ಲಿ, ಕೇಂದ್ರ ಉಪವಿಭಾಗದ ಎಸಿಪಿ ಹಾಗೂ ಉರ್ವಾ ಠಾಣೆಯ ಪಿ.ಐ ಮತ್ತು ಸಿಬ್ಬಂದಿ ತಂಡದ ತ್ವರಿತ ಕ್ರಮದಿಂದ ಪ್ರಕರಣ ಪತ್ತೆಹಚ್ಚಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post