ಅ. 22: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉತ್ಸವದಿಗಳು ಆರಂಭ.

ಕುಕ್ಕೆ ಸುಬ್ರಹ್ಮಣ್ಯ; ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವರ್ಷದ ಉತ್ಸವದಿಗಳು ಅಕ್ಟೋಬರ್ 22ರಂದು, ದೀಪಾವಳಿ–ಬಲಿಪಾಡ್ಯಮಿ ದಿನದಿಂದ ಆರಂಭಗೊಳ್ಳಲಿವೆ. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಲಿದ್ದು, ಅದರಿಂದ ಉತ್ಸವದಿಗಳಿಗೆ ಅಧಿಕೃತ ಚಾಲನೆ ಸಿಗಲಿದೆ.

ಬುಧವಾರ ಮಧ್ಯಾಹ್ನ ಮಹಾಪೂಜೆಯ ನಂತರ ದೇವಾಲಯ ಆವರಣದಲ್ಲಿ ಗಜಪೂಜೆ ವೈದಿಕ ವೈಭವದೊಂದಿಗೆ ನೆರವೇರಲಿದೆ. ಸಂಜೆ ಗೋದೋಳಿ ಲಗ್ನದಲ್ಲಿ ಗೋಪೂಜೆ ನಡೆಯಲಿದೆ. ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣದಲ್ಲಿ ಭಕ್ತರ ಮನ ಸೆಳೆಯುವ ಬಂಡಿ ಉತ್ಸವ ಹಾಗೂ ದೀಪಾರಾಧನೆಯು ನಡೆಯಲಿದ್ದು, ಅದಕ್ಕೂ ಬಳಿಕ ಶ್ರೀದೇವರ ಪಾಲಕ್ಕಿ ಉತ್ಸವ ಸಾಂಪ್ರದಾಯಿಕ ಶೈಲಿಯಲ್ಲಿ ಜರಗಲಿದೆ.

ದೀಪಾವಳಿಯ ಈ ಪಾವನ ಸಂದರ್ಭದಲ್ಲಿ ಪ್ರಾರಂಭಗೊಳ್ಳುವ ಕುಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವದಿಗಳು ಮುಂದಿನ ಕೆಲವು ದಿನಗಳು ವೈಭವದಿಂದ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

Post a Comment

Previous Post Next Post