ಕುಕ್ಕೆ ಸುಬ್ರಹ್ಮಣ್ಯ:ಅ.31:ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ 2025-26 ನವೆಂಬರ್ 3, ಸೋಮವಾರದಂದು ಭವ್ಯವಾಗಿ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯದ ಗಣ್ಯರು ಆಗಮಿಸಲಿದ್ದಾರೆ.
ಧ್ವಜಾರೋಹಣವನ್ನು ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ.
ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ, ಮುಜರಾಯಿ ಹಾಗೂ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಅವರು ನೆರವೇರಿಸಲಿದ್ದಾರೆ.
ಅಧ್ಯಕ್ಷತೆ ವಹಿಸಲಿರುವವರು ಕುಮಾರಿ ಭಾಗೀರಥಿ ಮುರುಳ್ಯ, ಶಾಸಕಿ, ಸುಳ್ಯ ವಿಧಾನಸಭಾ ಕ್ಷೇತ್ರ.
ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಸನ್ಮಾನ್ಯ ಯು.ಟಿ. ಬಾದರ್ ಫರೀದ್, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಸನ್ಮಾನ್ಯ ಅತಿಥಿಗಳಾಗಿ ಕೆಳಗಿನ ಗಣ್ಯರು ಹಾಜರಾಗಲಿದ್ದಾರೆ:
ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು (ಲೋಕಸಭೆ, ದ.ಕ.)
ಡಾ. ಭರತ್ ಶೆಟ್ಟಿ ವೈ., ಶಾಸಕರು (ಮಂಗಳೂರು ಉತ್ತರ)
ಶ್ರೀ ರಾಜೇಶ್ ನಾಯ್ಕ ಯು., ಶಾಸಕರು (ಬಂಟ್ವಾಳ)
ಶ್ರೀ ಡಿ. ವೇದವ್ಯಾಸ ಕಾಮತ್, ಶಾಸಕರು (ಮಂಗಳೂರು ದಕ್ಷಿಣ)
ಶ್ರೀ ಐವನ್ ಡಿ'ಸೋಜ, ಶಾಸಕರು (ವಿಧಾನಪರಿಷತ್)
ಶ್ರೀ ಮಂಜುನಾಥ ಭಂಡಾರಿ, ಶಾಸಕರು (ವಿಧಾನಪರಿಷತ್)
ಶ್ರೀ ಡಿ. ವೀರೇಂದ್ರ ಹೆಗ್ಗಡೆ, ಸಂಸದರು (ರಾಜ್ಯಸಭೆ)
ಶ್ರೀ ಹರೀಶ್ ಪೂಂಜ, ಶಾಸಕರು (ಬೆಳ್ತಂಗಡಿ)
ಶ್ರೀ ಉಮಾನಾಥ ಎ. ಕೋಟ್ಯಾನ್, ಶಾಸಕರು (ಮೂಡಬಿದ್ರೆ)
ಶ್ರೀ ಅಶೋಕ್ ಕುಮಾರ್ ರೈ, ಶಾಸಕರು (ಪುತ್ತೂರು)
ಶ್ರೀ ಎಸ್.ಎಲ್. ಭೋಜೇಗೌಡ, ಶ್ರೀ ಪ್ರತಾಪಸಿಂಹ ನಾಯಕ್ ಕೆ., ಡಾ. ಧನಂಜಯ ಸರ್ಜಿ ಹಾಗೂ ಶ್ರೀ ಕಿಶೋರ್ ಬಿ.ಆರ್. ಶಾಸಕರು (ವಿಧಾನಪರಿಷತ್).
ಈ ಕುರಿತು ಅಕ್ಟೋಬರ್ 31 ರಂದು ಕಾಲೇಜು ಪ್ರಾಚಾರ್ಯ ಶ್ರೀ ಸೋಮಶೇಖರ್ ನಾಯಕ್ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ದಾಬ್ಲೆ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್,ರಾಧಾಕೃಷ್ಣ ದೈಹಿಕ ಶಿಕ್ಷಣ ಉಪನ್ಯಾಸಕ ಹಾಗೂ ಕಾಲೇಜು ಶಿಕ್ಷಕ ವರ್ಗದ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸ್ಪರ್ಧೆಗಳು ಮೂರು ದಿನಗಳ ಕಾಲ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
Post a Comment