🚨 ಬಿ.ಸಿ.ರೋಡ್‌ನಲ್ಲಿ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ — ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲು.


ಬಂಟ್ವಾಳ
, ಅ. 30 (ಗುರುವಾರ):
ಪುತ್ತೂರಿನಲ್ಲಿ ಅಪಘಾತಕ್ಕೊಳಗಾದ ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಘಟನೆ ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಬಳಿ ನಡೆದಿದೆ.




ಮಾಹಿತಿಯ ಪ್ರಕಾರ, ದಿನಾಂಕ 30.10.2025 ರಂದು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ KA.22.C.1382 ಸಂಖ್ಯೆಯ ಅಂಬ್ಯುಲೆನ್ಸ್ ಮೂಲಕ ಗಂಭೀರ ಗಾಯಾಳುವನ್ನು ಸಾಗಿಸುತ್ತಿದ್ದ ವೇಳೆ, KA.19.EK.0696 ಸಂಖ್ಯೆಯ ದ್ವಿಚಕ್ರ ವಾಹನ ಸವಾರನು ಅಂಬ್ಯುಲೆನ್ಸ್‌ನ ಸೈರನ್ ಶಬ್ದ ಕೇಳಿದರೂ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಮಾಡಿದ ಎಂದು ತಿಳಿದುಬಂದಿದೆ.

ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ತುರ್ತು ಸೇವೆ ಕಾರ್ಯದಲ್ಲಿ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ಮಹಮ್ಮದ್ ಮನ್ಸೂರು (38), ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ನಿವಾಸಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ.128/2025, ಕಲಂ 110 ಮತ್ತು 125 ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.


Post a Comment

Previous Post Next Post