ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಬಸ್ಸು ತಗುದಾಣಗಳ ನವೀಕರಣ.

 ಸುಬ್ರಹ್ಮಣ್ಯ ಅಕ್ಟೋಬರ್ 18 : ಲಯನ್ಸ್  ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಒಳಪಟ್ಟ 12 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಅಂದಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುವುದಾಗಿದೆ. ಅದರಂತೆ ಈಗಾಗಲೇ 4 ಬಸ್ಸು ತಗುದಾಣ ಗಳಾದ ಅರಂಪಾಡಿ, ಹೊಸಳ್ಳಿಕೆ, ಪರ್ವತಮುಖಿ,ಹಾಗೂ ಕುಲಕುಂದ ಬಸ್ಸು ತಗ್ಗುದಾಣಗಳನ್ನು  ಪೇಂಟಿಂಗ್ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಗಿದೆ. ಈ 4 ತಂಗು ದಾಣಗಳ ಪ್ರಾಯೋಜಕರುಗಳಾಗಿ ಲಯನ್ಸ್ ಜಿಲ್ಲೆ 318 ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೇ ವಿಮಲಾ ರಂಗಯ್ಯ, ಡಾl ಶಿವಕುಮಾರ್ ಹೊಸಳ್ಳಿಕೆ, ಪ್ರಕಾಶ್ ಶೆಟ್ಟಿ ಕುಂದಾಪುರ, ದಿನೇಶ್ಎಂಪಿ, ಪವನ್ ಎಂಡಿ, ಸತೀಶ ಕೂಜುಗೋಡು, ಜಗದೀಶ ಪಡುಪು ಸಹಕರಿಸಿರುತ್ತಾರೆ. ಬಸು ತಗುದಾಣಗಳ ಲೋಕಾರ್ಪಣೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಖಜಾಂಜಿ ಭಾರತಿ ದಿನೇಶ್, ಸದಸ್ಯ ಮೋಹನ್ದಾಸ್ ರೈ, ಸುಬ್ರಮಣ್ಯ ಇನ್ನರ್ ವೀಲ್ ಕ್ಲಬ್ ಸದಸ್ಯರುಗಳಾದ ಶೋಭಾ ಗಿರಿಧರ್ ಹಾಗೂ ಜಾನಕಿ ವೆಂಕಟೇಶ್ ಹಾಜರಿದ್ದರು.

Post a Comment

Previous Post Next Post