ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಇಗ್ನೀಶಿಯ-2025” ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ನಡೆದ “ಪ್ರಾಡಕ್ಟ್ ಲಾಂಚ್” ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಿತೇಶ್ ಹಾಗೂ ನಿಕಿಲ್ ಕೆ. ಪ್ರಥಮ ಸ್ಥಾನ ಪಡೆದು ಶಾಲೆಗೆ ಗೌರವ ತಂದಿದ್ದಾರೆ.
ಹಾಗೆಯೇ “ಕಸದಿಂದ ರಸ” ಸ್ಪರ್ಧೆಯಲ್ಲಿ ಮೋಕ್ಷ ಹಾಗೂ ಪ್ರೀತಿ ಬಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕರಾದ ಪ್ರವೀಣ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ.
ಅದೇ ರೀತಿಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು ಇವರ ಆಶ್ರಯದಲ್ಲಿ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು, ನೂಜಿಬಾಳ್ತಿಲದಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ 17ರ ವಯೋಮಾನದ ಬಾಲಕಿಯರ ವಿಭಾಗ ಹಾಗೂ ಬಾಲಕರ ವಿಭಾಗದಲ್ಲಿ ಮೂರನೇ ಸಮಗ್ರ ಬಹುಮಾನ ಗಳಿಸಿ ಕ್ರೀಡಾಂಗಣದಲ್ಲಿಯೂ ಮಿಂಚಿದೆ.
🏅 17ರ ವಯೋಮಾನದ ಬಾಲಕರ ವಿಭಾಗದಲ್ಲಿ:
ನಮನ್ ಸಿ.ಎಲ್ – ಚಕ್ರ ಎಸೆತ ಪ್ರಥಮ, ಈಟಿ ಎಸೆತ ದ್ವಿತೀಯ
ಸಿಬಿನ್ ಚಾಕೊ – 3000 ಮೀ. ಓಟ ತೃತೀಯ
🏅 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ:
ಚೈತನ್ಯ – ತ್ರಿವಿಧ ಜಿಗಿತ ಪ್ರಥಮ
ಪುನರ್ವಿ ಕೆ.ಸಿ – 3000 ಮೀ. ಹಾಗೂ 1500 ಮೀ. ಓಟ ದ್ವಿತೀಯ
ತೃಷಾ – ಚಕ್ರ ಎಸೆತ ದ್ವಿತೀಯ, ಈಟಿ ಎಸೆತ ತೃತೀಯ
ನಿರೀಕ್ಷಾ – ಈಟಿ ಎಸೆತ ಪ್ರಥಮ, ಚಕ್ರ ಎಸೆತ ತೃತೀಯ
ಪೂಜಿತ – 3000 ಮೀ. ತೃತೀಯ
ಜ್ಞಾನವಿ – 800 ಮೀ. ಓಟ ದ್ವಿತೀಯ
4x400 ರಿಲೇ (ಚೈತನ್ಯ, ಪುನರ್ವಿ, ಪೂಜಿತ, ಜ್ಞಾನವಿ) – ದ್ವಿತೀಯ ಸ್ಥಾನ
🏅 14ರ ವಯೋಮಾನದ ಬಾಲಕರ ವಿಭಾಗ:
4x100 ರಿಲೇ (ಪ್ರೀತಮ್, ಮಂಜುನಾಥ, ವಿಶ್ವಾಸ್, ಸಾತ್ವಿಕ್) – ದ್ವಿತೀಯ ಸ್ಥಾನ
ಈ ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ವಿನಯ್ ಕೆ. ತರಬೇತಿ ನೀಡಿದ್ದಾರೆ.
Post a Comment