ಸುಬ್ರಹ್ಮಣ್ಯ: ಭಾರತ ಸರ್ಕಾರದ ಸೊಲಿಸಿಟರ್ ಜನರಲ್ ತುಷಾರ್ ಮೇಹ್ತಾ ಹಾಗೂ ಅಡಿಷನಲ್ ಸೊಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದರು. ದೇವರ ದರ್ಶನದ ಬಳಿಕ ಸಂಪುಟ ನರಸಿಂಹಸ್ವಾಮಿ ದೇವರ ದರ್ಶನ ಮಾಡಿದರು.
ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ದೇವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಇಬ್ಬರೂ ಗಣ್ಯರಿಗೆ ದೇವಸ್ಥಾನ ಆಡಳಿತ ಮಂಡಳಿಯವರು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಿದರು.
ತುಷಾರ್ ಮೇಹ್ತಾ ಅವರು ಪ್ರಸ್ತುತ ಭಾರತ ಸರ್ಕಾರದ Solicitor General of India, ಅಂದರೆ ಅಟಾರ್ನಿ ಜನರಲ್ ನಂತರದ ರಾಷ್ಟ್ರದ ದ್ವಿತೀಯ ಉನ್ನತ ಕಾನೂನು ಅಧಿಕಾರಿ. ಅವರು 2018ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅದೇ ರೀತಿ ಕೆ.ಎಂ. ನಟರಾಜ್ ಅವರು Additional Solicitor General of India ಹುದ್ದೆ ನಿರ್ವಹಿಸುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಲವು ಪ್ರಮುಖ ಪ್ರಕರಣಗಳನ್ನು ವಾದಿಸುತ್ತಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಬಳಿಕ ಇಬ್ಬರೂ ದೇವಾಲಯದ ಸೌಂದರ್ಯ ಮತ್ತು ವ್ಯವಸ್ಥೆಯನ್ನು ಮೆಚ್ಚಿದರು.
Post a Comment