📍ಕಡಬ ಮೀನು ಮಾರುಕಟ್ಟೆಯಲ್ಲಿ ಇಬ್ಬರ ನಡುವೆ ಗಲಾಟೆ – ಐದು ಮಂದಿಯ ವಿರುದ್ಧ ಪ್ರಕರಣ.

ಕಡಬ: ಕಡಬ ಸಂತೆಕಟ್ಟೆ ಸಮೀಪದ ಮೀನು ಮಾರುಕಟ್ಟೆಯಲ್ಲಿ ನವೆಂಬರ್ 1 ರಂದು ಬೆಳಿಗ್ಗೆ ನಡೆದ ಮೀನು ಮಾರಾಟದ ವಿಚಾರದ ಮೇಲೆ ಇಬ್ಬರ ನಡುವೆ ಉಂಟಾದ ಮಾತಿನ ಚಕಮಕಿ ಕೊನೆಗೆ ಹೊಡೆದಾಟಕ್ಕೆ ತಿರುಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




ಮೀನು ಮಾರಾಟದ ವಿಷಯದಲ್ಲಿ ರಾಜು ಮ್ಯಾಥ್ಯ ಮತ್ತು ಆದಂ ಎಂಬ ಇಬ್ಬರ ಅಂಗಡಿಗಳ ಮಧ್ಯೆ ವಾಗ್ವಾದ ಉಂಟಾಗಿ, ಬಳಿಕ ಸಾರ್ವಜನಿಕ ಸ್ಥಳದಲ್ಲೇ ರಾಜು ಮ್ಯಾಥ್ಯ, ಆದಂ, ಫಯಾಜ್, ರಕ್ಷಿತ್ ಮಾಣಿ ಹಾಗೂ ನೌಫಾಲ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಿದೆ.




ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.73/2025, ಕಲಂ: 194(2) BNS-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಕಡಬ ಠಾಣಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

📰 ಮೂಲ: ಕಡಬ ಪೊಲೀಸ್ ಠಾಣೆ ಪ್ರಕಟಣೆ
📅 ದಿನಾಂಕ: ನವೆಂಬರ್ 1, 2025
📍 ಸ್ಥಳ: ಕಡಬ ಸಂತೆಕಟ್ಟೆ ಮೀನು ಮಾರುಕಟ್ಟೆ

Post a Comment

Previous Post Next Post