ಸುಬ್ರಹ್ಮಣ್ಯ ನ. 1: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆವರಣದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೇ ಸುಜಾತ ಕಲ್ಲಾಜೆ ಧ್ವಜ ಆರೋಹಣ ಮಾಡಿ ನಮ್ಮ ಸಮೃದ್ಧ ಕರ್ನಾಟಕದ
ಸಂಸ್ಕಾರ,ಸಂಸ್ಕೃತಿ,ಆಚಾರ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ಕನ್ನಡದ ಕಂಪು ಎಲ್ಲೆಡೆ ಹರಡಲಿ,ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ,ಕನ್ನಡತನ ಎಲ್ಲರಲ್ಲೂ ಪಸರಿಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಬ್ರಹ್ಮಣ್ಯದ ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡುತೋಟ ಮಾತನಾಡಿ" ತನ್ನದೇ ಆದ ಭಾಷೆ, ಸಂಸ್ಕೃತಿ,ಸಂಸ್ಕಾರ ದೊಂದಿಗೆ ಸಹನೆ, ತಾಳ್ಮೆಯಿಂದ ಜೀವನ ಮಾಡುತ್ತಿರುವ ಕನ್ನಡಿಗರನ್ನ ಕೆಣಕಲು ನೆರೆಯ ರಾಜ್ಯದವರು ಬರುವುದು ಬೇಡ. ಕನ್ನಡದ ಮಣ್ಣಿನ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸೋಣ, ಬೆಳೆಸೋಣ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಬ್ರಮಣ್ಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷ ವೆಂಕಟೇಶ ಎಚ್ ಎಲ್ ಸದಸ್ಯರುಗಳಾದ ಶಿವರಾಮ ನೆಕ್ರಾಜ್, ಗಿರೀಶ ಆಚಾರ್ಯ ಸುಬ್ರಹ್ಮಣ್ಯ,ಹಾಗೂ ಸದಸ್ಯರುಗಳು, ನೆರೆಯ ವರ್ತಕರು, ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
Post a Comment