ಐವತ್ತೊಕ್ಲು ಗ್ರಾಮದಲ್ಲಿ ಅನಧಿಕೃತ ಜಾನುವಾರು ವಧೆ ಮನೆ ದಾಳಿ – 102.5 ಕೆ.ಜಿ. ಮಾಂಸ ವಶ, ಮೂವರು ಪರಾರಿ

ಸುಳ್ಯ, ನವೆಂಬರ್ 18, 2025:
ಐವತ್ತೊಕ್ಲು ಗ್ರಾಮದ ಚಾಮುಂಡಿ ಮೂಲೆ ಪ್ರದೇಶದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಕುರಿತು ಬಂದ  ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ತಂಡವು ಸಂಜೆ ದಾಳಿ ನಡೆಸಿ, ದೊಡ್ಡ ಪ್ರಮಾಣದ ಜಾನುವಾರು ಮಾಂಸ ಮತ್ತು ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಪೋಲೀಸ್ ಉಪನಿರೀಕ್ಷಕ ಕಾರ್ತಿಕ್ ಕೆ (ಕಾ&ಸು) ಅವರ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ, ಶೆಡ್‌ನಲ್ಲಿ ಒಬ್ಬ ವ್ಯಕ್ತಿ ಕತ್ತಿಯಿಂದ ಮಾಂಸ ಕತ್ತರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪೊಲೀಸರ ಆಗಮನವನ್ನು ಗಮನಿಸಿದ ಮೂವರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲೇ ಬಂಧಿತರಾದ ವ್ಯಕ್ತಿ:

ಹಮೀದ್ (45), ಕಡಬ ಗ್ರಾಮದ ನಿವಾಸಿ
ಅವರ ವಿಚಾರಣೆಯಲ್ಲಿ ಪರಾರಿಯಾಗಿರುವವರು ಮುಸ್ತಾಫ, ಶರೀಫ್ ಮತ್ತು ಜುಬೇರ್ ಎಂದು ತಿಳಿದುಬಂದಿದೆ.


ಸ್ಥಳ ಪರಿಶೀಲನೆ ವೇಳೆ ಪತ್ತೆಯಾದವು:

ಒಟ್ಟು 102.5 ಕೆ.ಜಿ. ಜಾನುವಾರು ಮಾಂಸ

ಜಾನುವಾರುಗಳ ಅಂಗಾಂಗಗಳು ಮತ್ತು ತ್ಯಾಜ್ಯ

ಮಾಂಸ ಮಾಡಲು ಬಳಸಿದ ಕತ್ತಿ, ತೂಕದ ಯಂತ್ರ, ಇತರೆ ಸಲಕರಣೆಗಳು

ವಧೆಗೆ ತರಲಾಗಿದ್ದ ಮೂರು ಜಾನುವಾರುಗಳು

ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಒಂದು ದ್ವಿಚಕ್ರವಾಹನ


ಎಲ್ಲಾ ವಸ್ತುಗಳನ್ನು ಹಾಗು ಜಾನುವಾರುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 57/2025 ಅಡಿ
ಕರ್ನಾಟಕ ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ–2020 ಕಲಂಗಳು 4, 7, 12
ಮತ್ತು
ಐಎಂವೀ ಕಾಯ್ದೆ ಕಲಂ 66, 192(A)
ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿದಿದೆ.

Post a Comment

Previous Post Next Post