52 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವು ಮಂಗಳೂರಿನ ನೆಹರು ಮೈದಾನದಲ್ಲಿ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹರೀಶ್ ಕುಮಾರ್ ಇವರಿಂದ ಯೋಗ, ಸಂಗೀತ, ನಾಟ್ಯದಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಕಡಬ ತಾಲೂಕು ಶಿರಾಡಿ ನಿವಾಸಿ ಅರ್ಚನಾ ಸಂಪ್ಯಾಡಿ ಯವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
ಶಿರಾಡಿ ಗ್ರಾಮದ ಸಂಪ್ಯಾಡಿಯ ಸುದರ್ಶನ್ ಕುಮಾರ್ ಮತ್ತು ರಮ್ಯ ದಂಪತಿಗಳ ಪುತ್ರಿಯಾಗಿರುವ ಅರ್ಚನ ಬಾಲ್ಯದಿಂದಲೇ ಪ್ರತಿಭಾ ಸಂಪನ್ನೇ ಎರಡೂವರೆ ವರ್ಷದಲ್ಲೇ ಕೃಷ್ಣ ವೇಷ ಧರಿಸಿ ಹಲವು ವೇದಿಕೆ ಗಳಲ್ಲಿ ಬಹುಮಾನ ಪಡೆದವರು, ಬಾರತನಾಟ್ಯದಲ್ಲಿ ಜೂನಿಯರ್ ಗ್ರೇಡ್ ಪರೀಕ್ಷೆ ಯಲ್ಲಿ ಅತ್ತ್ಯು ನ್ನತ ಶ್ರೇಣಿಯಲ್ಲಿ ಉತ್ತಿ ರ್ಣ ರಾಗಿರುವ ಈಕೆ ಭರತನಾಟ್ಯದ ಹಲವು ಶೈಲಿಗಳಲ್ಲಿ ತನ್ನದೇ ಚಾಪು ಮೂಡಿ ಸಿರುವ ಪ್ರತಿಭಾ ಸಂಪನ್ನೇ,ಏಳವೆ ಯಿಂದಲೇ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ
ಅರ್ಚನಾ ಸಂಪ್ಯಾಡಿ ಯೋಗದಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾರೆ.ಅಲ್ಲದೆ ಯೋಗಭ್ಯಾಸದ ಮೂಲಕ ದೀಪ ನೃತ್ಯ ಪ್ರದರ್ಶನ ನೀಡುವುದರಲ್ಲಿ ವಿಶಿಷ್ಟತೆ ತೋರಿದವರು. ಹೀಗೆ ಭರತ ನಾಟ್ಯ, ಯೋಗ ನೃತ್ಯ, ಪಾಶ್ಚಾತ್ಯ ನೃತ್ಯ, ಅರೆ ಶಾಸ್ತ್ರೀಯ, ಜಾನಪದ, ಯಕ್ಷ ನಾಟ್ಯ, ಮತ್ತು ಕಥಕ್ ಶೈಲಿ ನೃತ್ಯದಲ್ಲಿ ಸುಮಾರು 700 ರಕ್ಕೂ ಮಿಕ್ಕಿ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಬಾಲ ಕಲಾವಿದೆ, ನೆಲ್ಯಾಡಿಯ ಪ್ರತಿಷ್ಠಿತ ಕಲಾ ತಂಡ ನಟವರ್ಯ ನಾಟ್ಯ ತಂಡದ ಕಲಾವಿದೆಯಾಗಿ ನೂರಾರು ಪ್ರದರ್ಶನ ನೀಡಿದಲ್ಲದೆ ರಾಜ್ಯ, ರಾಷ್ಟ್ರೀಯ, ಅಂತ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಾಗವಹಿಸಿ ಹಲವು ಪ್ರಶಸ್ತಿ, ಗೌರವ, ಸನ್ಮಾನ ಗಳನ್ನು ಪಡೆದಿದ್ದಾರೆ. 7ನೇ ತರಗತಿ ಯವರೆಗೆ ಉದನೆ ಪೊಲೀ ಕಾರ್ಪಸ್ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ನೆಲ್ಲ್ಯಾಡಿಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.
Post a Comment