ಗುತ್ತಿಗಾರು ವಲಯದಲ್ಲಿ ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕಾರ್ತಿಕ ಮಾಸದ ಸರಣಿ ಗೌಪೂಜೆಯ ಅಂಗವಾಗಿ, ಸುಬ್ರಹ್ಮಣ್ಯ ದರ್ಪಣತೀರ್ಥ ಘಟಕದ ಬರ್ಲಾಯಬೆಟ್ಟು ಶಿವರಾಮ ಭಟ್ ಹಾಗೂ ನೂಚಿಲ ಅವರ ಮನೆಯಲ್ಲಿ ಭಕ್ತಿ ಪೂರ್ವಕ ಗೌಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ವೇ.ಮೂ. ಶಂಕರನಾರಾಯಣ ಶಾಸ್ತ್ರಿ ಹಾಗೂ ವೇ.ಮೂ. ಸುವೀರ ಕುಮಾರ್ ಪಿದಮಲೆ (ಸುಬ್ರಹ್ಮಣ್ಯ) ಅವರ ನೇತೃತ್ವದಲ್ಲಿ ಗೌಪೂಜೆ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀಕೃಷ್ಣ ಶರ್ಮ, ವಲಯ ಧರ್ಮಭಾರತಿ ಪ್ರಧಾನೆಯಾದ ಜಯಂತಿ ದೇವರಗದ್ದೆ, ಸುಭಾಷಿಣಿ ಸುಬ್ರಹ್ಮಣ್ಯ, ಶಿವರಾಮ ಭಟ್, ನಂದಕಿಶೋರ್, ಶ್ರೀಮತಿ ಅರ್ಚನಾ, ಪ್ರಸನ್ನ ಭಟ್ ಮೊದಲಾದ ಭಕ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆಡ್ಲಾ ಗೋಶಾಲೆಗೆ ಗೌನಿಧಿ ರೂಪಾಯಿ 800 ಸಂಗ್ರಹವಾಗಿ ಸಮರ್ಪಿಸಲಾಯಿತು.
ಹರೇ ರಾಮ 🙏✨
Post a Comment