ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ನೇತೃತ್ವದ ನಿಯೋಗದಲ್ಲಿ ಸಮಿತಿ ಸದಸ್ಯೆಯರಾದ ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣಾ ರೈ, ಸದಸ್ಯರಾದ ಅಜಿತ್ ಪಾಲೇರಿ, ಡಾ. ರಘು, ಮಾಸ್ಟರ್‌ಪ್ಲಾನ್ ಸದಸ್ಯ ಸತೀಶ್ ಕುಜುಗೋಡು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ನಿಯೋಗವು ಬೆಂಗಳೂರಿನಲ್ಲಿ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಸುಬ್ರಮಣ್ಯ ಕ್ಷೇತ್ರದ ಸಾಂಸ್ಕೃತಿಕ–ಆಧ್ಯಾತ್ಮಿಕ ವೈಭವವನ್ನು ವಿವರಿಸಿ, ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಇದೇ ಸಂದರ್ಭದಲ್ಲಿ ಮಾನ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹಾಗೂ ರಾಜ್ಯದ ವಿವಿಧ ಇಲಾಖೆಗಳ ವಿಧಾನಸಭಾ ಸಚಿವರು–ಶಾಸಕರಿಗೂ ದೇವಸ್ಥಾನದ ವತಿಯಿಂದ ಆಮಂತ್ರಣ ನೀಡಿದರು.
ಕುಕ್ಕೆಯಿಂದ ವಿಶೇಷವಾಗಿ ಬೆಂಗಳೂರಿಗೆ ತೆರಳಿದ ಸಮಿತಿ ನಿಯೋಗದ ಈ ಭೇಟಿಯನ್ನು ರಾಜ್ಯದ ಸಾಂಸ್ಕೃತಿಕ ವಲಯ ಪ್ರಶಂಸಿಸಿದ್ದು, ಮುಂಬರುವ ಚಂಪಾ ಸೃಷ್ಟಿ ಉತ್ಸವ ಹೆಚ್ಚು ಭವ್ಯವಾಗಿ ನಡೆಯಲಿರುವ ನಿರೀಕ್ಷೆ ವ್ಯಕ್ತವಾಗಿದೆ.
Post a Comment