ಸುಬ್ರಹ್ಮಣ್ಯ: ಮುಂಬರುವ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಹಿನ್ನೆಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಲಕ್ಷದೀಪೋತ್ಸವದ ಭವ್ಯ ಸಿದ್ಧತೆಗಳು ಆರಂಭಗೊಂಡಿದ್ದು, ನವೆಂಬರ್ 16 ರಂದು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಸಭೆಯಲ್ಲಿ ಲಕ್ಷದೀಪ ದಿನದಂದು ರಥಬೀದಿ ಹಾಗೂ ಪ್ರಮುಖ ಮಾರ್ಗಗಳಲ್ಲಿ ಹಣತೆ ಹಚ್ಚುವ ವ್ಯವಸ್ಥೆಗಾಗಿ ಗ್ರಾಮಸ್ಥರು, ವಿವಿಧ ಸಂಘ–ಸಂಸ್ಥೆಗಳು, ಆಟೋ ಹಾಗೂ ಟ್ಯಾಕ್ಸಿ ಚಾಲಕ–ಮಾಲಕ ಸಂಘಗಳು, ವರ್ತಕರು ಸೇರಿ ಒಂದೊಂದು ಜವಾಬ್ದಾರಿಗಳನ್ನು ವಹಿಸಿಕೊಂಡರು.
ಸಭೆಯಲ್ಲಿ ಭಾಗವಹಿಸಿದ ಪ್ರಮುಖರು;
ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್.
ವ್ಯವಸ್ಥಾಪನ ಸಮಿತಿ ಸದಸ್ಯರಾದ
ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣಾ ರೈ, ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಲೋಕಕ್ಷ ಕೈಕಂಬ, ಪವನ್ ಎಂ.ಡಿ, ಕೆಡಿಪಿ ಸದಸ್ಯ ಶಿವರಾಮ ರೈ, ಉದ್ಯಮಿ ಕಿಶೋರ್ ಆರಂಪಾಡಿ, ರವೀಂದ್ರ, ಕುಸುಮಾದರ ಹಾಗೂ ಹಲವು ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
---
ಲಕ್ಷದೀಪೋತ್ಸವ – 2025-26 : ಹಣತೆ ಹಚ್ಚುವ ಜವಾಬ್ದಾರಿಯ ವಿಂಗಡಣೆ
ಸಂಪೂರ್ಣ ಮೇಲುಸ್ತುವಾರಿ:
ಶ್ರೀ ಶಿವರಾಮ ರೈ, ಶ್ರೀ ರವೀಂದ್ರ ಕೆ.ಸುಬ್ರಹ್ಮಣ್ಯ, ಕಿಶೋರ್ ಆರಂಪಾಡಿ
1. ರಥಬೀದಿ (ಎರಡು ಬದಿಗಳು)
ಶ್ರೀ ಯಜೇಶ್ ಆಚಾರ್ಯ ಮತ್ತು ಕುಮಾರಸ್ವಾಮಿ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು
2. ಸವಾರಿ ಮಂಟಪ
ಶ್ರೀ ಜಯರಾಮು ಹೆಚ್.ಎಲ್, ಉಮೇಶ್ ಕೆ.ಎನ್., ಗುರುಸ್ವಾಮಿ
ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ
3. ಆಟೋ ಸ್ಟಾಂಡ್ ಜಂಕ್ಷನ್ – ಸವಾರಿ ಮಂಟಪ
ಕುಕ್ಕೆ ಶ್ರೀ ಆಟೋ ಚಾಲಕ–ಮಾಲಕ ಸಂಘ
4. ರಥಬೀದಿ ಜಂಕ್ಷನ್ – ರಕೇಶ್ವರಿ ಗುಡಿ (ಎಡಬದಿ)
ಅಶ್ವಮೇಧ ಫ್ರೆಂಡ್ಸ್
ದುರ್ಗಾಂಬ ಫ್ಲವರ್ ಸ್ಟಾಲ್ ಬಳಗ
6. ಆದಿಶೇಷ ರಸ್ತೆ
ಶ್ರೀ ಅಚ್ಚುತ ಗೌಡ
ಶ್ರೀ ಯಶೋಧ ಕೃಷ್ಣ ನೂಚಿಲ
ಕುಕ್ಕೆ ಶ್ರೀ ಸರ್ಕಲ್
7. ರಕೇಶ್ವರಿ ಗುಡಿ – ಟ್ಯಾಕ್ಸಿ ಸ್ಟಾಂಡ್
ಟ್ಯಾಕ್ಸಿ ಚಾಲಕ–ಮಾಲಕರ ಸಂಘ
8. ಟ್ಯಾಕ್ಸಿ ಸ್ಟಾಂಡ್ – ಕಾಶಿಕಟ್ಟೆ (ಎಡಬದಿ)
ಸಂಜೀವಿನಿ ಒಕ್ಕೂಟ
ಹಿಂದೂ ಜಾಗರಣಾ ವೇದಿಕೆ ಒಕ್ಕೂಟ
10. ಕಾಶಿಕಟ್ಟೆ ವೃತ್ತ (ಎಡಬದಿ)
ಶ್ರೀ ಪುಟ್ಟ ವಾಲಗದಕೇರಿ ಮತ್ತು ಬಳಗ
11. ಪಂಚಾಯತ್ ಎದುರುಗಡೆ
ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ವರ್ಗ
12. ಆರಕ್ಷಕ ಠಾಣೆ,
ಠಾಣಾಧಿಕಾರಿ ಹಾಗೂ ಸಿಬ್ಬಂದಿ
13. ಐನೆಕಿದು ಸೊಸೈಟಿ
ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ
14. ಮಹಿಳಾ ಸೊಸೈಟಿ
ಶ್ರೀಮತಿ ವಾರಿಜಾಕ್ಷಿ ಮತ್ತು ಸಿಬ್ಬಂದಿ
ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ – ಕುಕ್ಕೆ ಮೇಟ್ಸ್
15. ಮಹಿಳಾ ಸೊಸೈಟಿಯಿಂದ ಬಸ್ ಸ್ಟಾಂಡ್ ವರೆಗೆ
ಬಿ.ಎಂ.ಎಸ್. ಆಟೋ ಚಾಲಕ–ಮಾಲಕ ಸಂಘ
16. ಬಸ್ ಸ್ಟ್ಯಾಂಡ್ – ಜಂಕ್ಷನ್
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ
ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ
17. ವಾಹನ ಪಾರ್ಕಿಂಗ್ – ಬೈಪಾಸ್ ರಸ್ತೆ
ಎ.ಬಿ.ವಿ.ಪಿ – ಕೆ.ಎಸ್.ಎಸ್. ಕಾಲೇಜು
ಶ್ರೀ ರಾಮಚಂದ್ರ ಅಗೋಳಿಕತೆ
18. ಕುಮಾರಧಾರ ಪ್ರದೇಶ
ಭಜರಂಗದಳ – ಶ್ರೀ ಅಶೋಕ್ ಆಚಾರ್ಯ, ಶ್ರೀ ರಾಧಾಕೃಷ್ಣ ಆರಾವಾರ
ವಿಶ್ವ ಹಿಂದೂ ಪರಿಷತ್
ಪರ್ವತಮುಖಿ ಫ್ರೆಂಡ್ಸ್ ಸರ್ಕಲ್
ಕುಮಾರಧಾರ ಫ್ರೆಂಡ್ಸ್
19. ಆದಿ ಸುಬ್ರಹ್ಮಣ್ಯ
ರವೀಂದ್ರ ನೂಚಿಲ, ಉದಯ ನೂಚಿಲ
ಯುವ ಬ್ರಿಗೇಡ್ ತಂಡ
20. ಆದಿ ಸುಬ್ರಹ್ಮಣ್ಯ ಉದ್ಯಾನವನ
ಶ್ರೀ ಸೋಮಶೇಖರ್ ಪ್ರಾಚಾರ್ಯರು ಹಾಗೂ ಎಸ್.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿಗಳು
---
ಹಣತೆ ಉರಿಸುವ ಸಮಯ: 19/11/2025 – ಸಂಜೆ 6.00 ಗಂಟೆ
ಹಣತೆ ಉರಿಸುವ ಸಮಯ: 9.00 PM (ಉತ್ಸವ ಸಮಯದಲ್ಲಿ)
---
ಉಸ್ತುವಾರಿ ಪಡೆದ ಶಿವರಾಮ್ ರೈ ಅವರ ಭಕ್ತರಿಗೆ ವಿನಂತಿ –
ಈ ಸಂದರ್ಭದಲ್ಲಿ ಉಸ್ತುವಾರಿ ಪಡೆದ ಶ್ರೀ ಶಿವರಾಮ್ ರೈ ಅವರು ಭಕ್ತರಲ್ಲಿ ವಿನಂತಿ ಮಾಡಿಕೊಂಡಿದ್ದು ಹೀಗಿದೆ:
ಪ್ರತಿ ಮನೆಗೆ 10 ಹಣತೆಗಳನ್ನು ನೀಡಲಾಗುತ್ತದೆ
ಎಣ್ಣೆ, ಬತ್ತಿ, ಕರ್ಪೂರ—all materials provided by the temple
ಹೆಚ್ಚಿನ ಭಕ್ತರು ಆಗಮಿಸಿ, ಭಕ್ತಿಭಾವದಿಂದ ದೇವರಿಗೆ ಹಣತೆ ಹಚ್ಚಿ ಲಕ್ಷದೀಪೋತ್ಸವವನ್ನು ಭವ್ಯವಾಗಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.
Post a Comment