ಸುಬ್ರಹ್ಮಣ್ಯ ನವಂಬರ್ 2 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶುದ್ಧ ಏಕಾದಶಿ ಆದರೂ ದೂರ ದೂರಗಳಿಂದ ಶ್ರೀ ದೇವರ ದರ್ಶನಕ್ಕೆ ಬಂದ ಭಕ್ತರೇ ಅಧಿಕವಾಗಿದ್ದರು. ಜಾವದಲ್ಲಿ ಕುಮಾರಧಾರ ಸ್ಥಾನಗಟ್ಟದ ಬಳಿ ಬೆಳಗ್ಗಿನ ಜಾವ ತೀರ್ಥ ಸ್ಥಾನ ಮಾಡಲು ಭಕ್ತರ ದಂಡೆ ಇತ್ತು. ಶ್ರೀ ದೇವಳದ ವತಿಯಿಂದ ತೀರ್ಥ ಸ್ಥಾನ ಮಾಡುವ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ, ವಿಶ್ರಾಂತಿ ಗ್ರಹ ವ್ಯವಸ್ಥೆ, ಮಾಡಲಾಗಿತ್ತು.ಹಾಗೆ ಪುರುಷ ಭಕ್ತರಿಗೂ ಶೌಚಾಲಯ ವ್ಯವಸ್ಥೆ ಇತ್ತು. ಅಲ್ಲದೆ ಭಕ್ತರು ತೀರ್ಥ ಸ್ಥಾನ ಮಾಡುವಾಗ ಸಾಬೂನು,ಶಾಂಪೂ ಇತ್ಯಾದಿಗಳನ್ನ ಬಳಸಬಾರದೆಂಬ ಕಟ್ಟಪ್ಪಣಿಯು ಶ್ರೀದೇವಳದ ವತಿಯಿಂದ ಆಗಾಗ ಮಾಹಿತಿಯನ್ನ ಮೈಕದಲ್ಲಿ ನೀಡಲಾಗುತ್ತಿತ್ತು. ಆದರೂ ಕೆಲವು ಭಕ್ತರು ಇದನ್ನು ಲೆಕ್ಕಿಸದೆ ತಾವು ತೀರ್ಥ ಸ್ನಾನ ಮಾಡಿದ ನಂತರ ತಮ್ಮ ಬಟ್ಟೆಗಳನ್ನ ನೀರಿನಲ್ಲಿ ಬಿಡುತ್ತಿರುವುದು ಕೂಡ ಕಂಡು ಬಂತು ಈ ಹಿಂದೆ ಹೀಗೆ ನದಿಯಲ್ಲಿದ್ದ ಲೋಡ್ ಗಟ್ಲೆ ಬಟ್ಟೆಯನ್ನು ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಮೇಲೆತ್ತಿ ಹಾಕಿದ್ದನ್ನ ಇಲ್ಲಿ ಗಮನಿಸಬಹುದು . ಈ ನಿಟ್ಟಿನಲ್ಲಿ ದೇವಳದವರು ಸಿಸಿ ಕ್ಯಾಮೆರಾಗಳನ್ನ ಅಳವಡಿಸಿ ನದಿಯಲ್ಲಿ ಬಟ್ಟೆಯನ್ನು ಬಿಡುವವರ ಮೇಲೆ ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಕುಕ್ಕೆ ಶುದ್ಧ ಏಕಾದಶಿಯಂದು ಸ್ನಾನಘಟ್ಟದ ಬಳಿ ತೀರ್ಥ ಸ್ನಾನಕ್ಕಾಗಿ ಭಕ್ತರ ದಂಡು.
Newspad
0
Premium By
Raushan Design With
Shroff Templates
Post a Comment