ಕುಕ್ಕೆ ಸುಬ್ರಹ್ಮಣ್ಯ:ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮ ನವೆಂಬರ್ 5ರಂದು ಭವ್ಯವಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪೂರ್ವಭಾವಿ ಸಾರ್ವಜನಿಕ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ವಹಿಸಿದ್ದರು. ಸಭೆಯಲ್ಲಿ ಬೆಳ್ಳಿರಥವು ಕುಕ್ಕೆ ಸುಬ್ರಹ್ಮಣ್ಯ ಪುರ ಪ್ರವೇಶಿಸುವ ವೇಳೆಯಲ್ಲಿ ಭವ್ಯ ಸ್ವಾಗತವನ್ನು ಹೇಗೆ ಆಯೋಜಿಸಬೇಕು ಎಂಬ ಕುರಿತು ಚರ್ಚೆ ನಡೆಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಜೆ, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣಾ ರೈ, ಅಜಿತ್ ಪಾಲೇರಿ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಪವನ್ ಯಂ, ಡಿ.ಕೆ.ಡಿಪಿ ಸದಸ್ಯ ಶಿವರಾಮ ರೈ, ಮಾಜಿ ಸಮಿತಿ ಸದಸ್ಯ ಮಾಧವ, ಗ್ರಾಮ ಪಂಚಾಯತ್ ಸದಸ್ಯೆ ಭಾರತೀ ದಿನೇಶ್ ಹಾಗೂ ಆಟೋ ಚಾಲಕ ಮಾಲಕ ಸಂಘದ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಳ್ಳಿರಥದ ಆಗಮನದ ಸಂದರ್ಭದಲ್ಲಿ ದೇವರ ಭಕ್ತರು, ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧತೆ ವ್ಯಕ್ತಪಡಿಸಿದರು. ಸ್ವಾಗತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಉದ್ದೇಶದಿಂದ ನಾಳೆಯಿಂದಲೇ ಎಲ್ಲಾ ತಯಾರಿಗಳು ಆರಂಭವಾಗಲಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
Post a Comment