ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಪಡೆದರು.

ಕುಕ್ಕೆ ಸುಬ್ರಹ್ಮಣ್ಯ, ನ. — ಕೇರಳದ ಕಾಸರಗೋಡು ಜಿಲ್ಲೆಯ ಪ್ರಸಿದ್ಧ 400 ವರ್ಷಗಳ ಇತಿಹಾಸ ಹೊಂದಿರುವ ಎಡನೀರು ಮಠದ ಪೀಠಾಧ್ಯಕ್ಷರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಇಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

ಸ್ವಾಮೀಜಿಗಳು ದೇವಸ್ಥಾನ ಪ್ರವೇಶಿಸಿದ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಶಿಷ್ಟಾಚಾರದ ಪ್ರಕಾರ ಪೂರ್ಣ ಗೌರವ ನೀಡಿ ಸ್ವಾಗತಿಸಿ, ದೇವರ ದರ್ಶನ ವ್ಯವಸ್ಥೆ ಮಾಡಿಕೊಟ್ಟರು. ನಂತರ ಸ್ವಾಮೀಜಿಗಳಿಗೆ ದೇವರ ವಿಶೇಷ ದರ್ಶನ ಹಾಗೂ ಆಶೀರ್ವಚನ ಸ್ವೀಕರಿಸುವ ಅವಕಾಶ ಒದಗಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಜೆ, ಉದ್ಯಮಿ ಕಿಶೋರ್ ಆರಂಪಾಡಿ, ರವೀಂದ್ರ ಕೆ., ಶಿಷ್ಟಾಚಾರ ವಿಭಾಗದ ಮುಖ್ಯಸ್ಥ ಜಯರಾಮ್ ಉಪಸ್ಥಿತರಿದ್ದು, ಸ್ವಾಮೀಜಿಗಳಿಗೆ ಗೌರವಯುತವಾಗಿ ದೇವರ ದರ್ಶನ ನೆರವೇರಿಸಿದರು.

ಎಡನೀರು ಮಠದ ಪರಂಪರೆ ಮತ್ತು ಸ್ವಾಮೀಜಿಗಳ ಹಿನ್ನೆಲೆ
ಎಡನೀರು ಮಠವು ಆದಿ ಶಂಕರಾಚಾರ್ಯರ ಶಿಷ್ಯರಾದ ಟೋಟಕಾಚಾರ್ಯರ ಪರಂಪರೆ ಅನುಸರಿಸುವ ಪ್ರಸಿದ್ಧ ಸ್ಮಾರ್ತ ಮಠವಾಗಿದ್ದು, ಕಲಾ–ಸಂಸ್ಕೃತಿ ಮತ್ತು ಧಾರ್ಮಿಕ ಅಧ್ಯಯನದ ಪ್ರಮುಖ ಕೇಂದ್ರವಾಗಿದೆ.
2020ರ ಅಕ್ಟೋಬರ್ 28ರಂದು ನಡೆದ ಪೀಠಾರೋಹಣ ಸಮಾರಂಭದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಪೀಠಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು. ಪೂರ್ವಪೀಠಾಧ್ಯಕ್ಷರಾಗಿದ್ದ ದಿವಂಗತ ಕೇಶವಾನಂದ ಭಾರತಿ ಸ್ವಾಮೀಜಿಗಳು ಮಠವನ್ನು ಸಾಕಷ್ಟು ವರ್ಷಗಳ ಕಾಲ ಸೇವೆಸಲ್ಲಿಸಿ, ಕಾನೂನು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಂಭೀರ ಕೊಡುಗೆ ನೀಡಿದ್ದರು.

ಹೊಸ ಪೀಠಾಧ್ಯಕ್ಷರಾದ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ತಮ್ಮ ಮಠದ ಪರಂಪರೆ, ಅಧ್ಯಾತ್ಮ, ಸಾಮಾಜಿಕ ಜಾಗೃತಿ, ಸೇವಾ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಮಠದ ಕಾರ್ಯೋನ್ನತಿಯತ್ತ ತಮ್ಮನ್ನು ತೊಡಗಿಸಿಕೊಂಡಿರುವರು.

ಸ್ವಾಮೀಜಿಗಳ ದರ್ಶನಾಕಾಂಕ್ಷೆಯಿಂದ ಭಕ್ತರಿಗೆ ವಿಶೇಷ ಸಂತಸ
ಸ್ವಾಮೀಜಿಗಳು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಸುದ್ದಿ ತಿಳಿದ ಕೂಡಲೇ ಭಕ್ತರಲ್ಲಿ ಸಂತಸ ವ್ಯಕ್ತವಾಗಿದ್ದು, ಭಕ್ತರನ್ನು ಆಶೀರ್ವದಿಸಿದರು.

Post a Comment

Previous Post Next Post