ಸುಬ್ರಹ್ಮಣ್ಯ: ಐನೆಕಿದು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕೃಷಿಗೆ ಭಾರೀ ಹಾನಿಯಾದ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 19ರಂದು ಸುರೇಶ್ ಕೂಜುಗೋಡು ಅವರ ತೋಟಕ್ಕೆ ಕಾಡಾನೆ ನುಗ್ಗಿ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ಧ್ವಂಸ ಮಾಡಿರುವುದು ತಿಳಿದು ಬಂದಿದೆ. ಇದೇ ರೀತಿಯಾಗಿ ಡಿಸೆಂಬರ್ 18ರಂದು ಜಯಪ್ರಕಾಶ್ ಕೂಜುಗೋಡು ಅವರ ತೋಟದಲ್ಲಿಯೂ ಆನೆ ದಾಳಿ ನಡೆದಿದ್ದು, ಅಡಿಕೆ ಮತ್ತು ತೆಂಗಿನ ಗಿಡಗಳು ಹಾನಿಗೊಳಗಾಗಿ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಹಳದಿ ರೋಗ, ಬೆಂಕಿ ರೋಗ, ಕೊಳೆ ರೋಗದಂತಹ ಕೀಟ–ರೋಗಗಳಿಂದಲೇ ಬೆಳೆ ಹಾನಿಗೊಳಗಾಗಿದ್ದ ರೈತರು, ಇದೀಗ ಕಾಡುಪ್ರಾಣಿ ದಾಳಿಯಿಂದಲೂ ತತ್ತರಿಸಿ ಹೋಗಿದ್ದಾರೆ. ನಿರಂತರ ನಷ್ಟದಿಂದ ಜೀವನ ನಿರ್ವಹಣೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.
ಗ್ರಾಮಸ್ಥರು ಮತ್ತು ರೈತರು ಸಂಬಂಧಿತ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆ ಚಲಾವಣೆ ಮತ್ತು ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ತಾಲೂಕು ಮಟ್ಟದಲ್ಲಿ ದೂರು ಸಲ್ಲಿಸುವ ಮತ್ತು ಪರಿಹಾರ ಪ್ರಕ್ರಿಯೆ ಆರಂಭಿಸುವ ಭರವಸೆ ದೊರೆತಿದೆ ಎನ್ನಲಾಗಿದೆ.
Post a Comment