ಕುಕ್ಕೆ ಕಿರುಷಷ್ಟಿ ಆಮಂತ್ರಣದಲ್ಲಿ ಅನ್ಯಧರ್ಮಿಯರ ಹೆಸರು: ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ಆಕ್ಷೇಪ – ಹೆಸರು ತೆಗೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ.

ಕುಕ್ಕೆ ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಟಿ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರು ಸೇರಿಸಿರುವುದು ಆಕ್ಷೇಪಾರ್ಹ ಎಂದು ಆರೋಪಿಸಿ ಕ್ಷೇತ್ರ ಸಂರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ. ಹೆಸರು ತೆಗೆಯದಿದ್ದಲ್ಲಿ ಡಿಸೆಂಬರ್ 22 ರಂದು ದೇವಸ್ಥಾನ ಆಡಳಿತ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ.
ಈ ಬಗ್ಗೆ ಇಂದು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿದಾನಂದ ಕಂದಡ್ಕ, ರಾಜೇಶ್ ಎನ್.ಎಸ್, ದಿನೇಶ್ ಸಂಪ್ಯಾಡಿ, ಅಚ್ಚುತ ಕುಕ್ಕಪ್ಪನ ಮನೆ, ಶ್ರೀಕುಮಾರ್ ಬಿಲದ್ವಾರ, ರಾಮಚಂದ್ರ ದೇವರಗದ್ದೆ, ದೀಲಿಪ್ ಉಪ್ಪಳಿಕೆ ಸೇರಿದಂತೆ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ವೇದಿಕೆ ವತಿಯಿಂದ “ಧಾರ್ಮಿಕ ಆಚರಣೆಗಳಲ್ಲಿ ಅನ್ಯಧರ್ಮೀಯರ ಹೆಸರಿನ ಬಳಕೆ ಅಸಂಗತ” ಎಂಬ ಕಾರಣವನ್ನು ಉಲ್ಲೇಖಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಡಲಾಗಿದೆ.
ದೇವಸ್ಥಾನ ಆಡಳಿತದಿಂದ ಸಂಬಂಧಿಸಿದ ಪ್ರತಿಕ್ರಿಯೆ ಹೊರಬರಬೇಕಿದೆ.

Post a Comment

Previous Post Next Post