ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 48 ನೇ ವರ್ಷದ ಘಟಕಾಡಳಿತ ಮಂಡಳಿಯ ಪದಪ್ರದಾನ ಸಮಾರಂಭ ರೋಟರಿ ಸಮುದಾಯ ಭವನ ಉಪ್ಪಿನಂಗಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪದ್ಮುಂಜ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಮಹಾಲಿಂಗೇಶ್ವರ ಭಟ್ ಮಧುವನ ಮಾತನಾಡಿ, ಜೆಸಿಐ ಸಂಘಟನೆಯು ಉತ್ತಮ ಯುವಕರ ಸಂಘಟನೆಯಾಗಿದ್ದು, ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಗಾಗಿ ಉತ್ತಮ ಹೆಸರನ್ನು ಪಡೆದುಕೊಂಡಿದೆ ಎಂದರು. ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ನೂತನ ಘಟಕ ಅಧ್ಯಕ್ಷರಾದ ಅವನೀಶ್ ಪಿ ಮತ್ತು ತಂಡಕ್ಕೆ ಪ್ರಮಾಣ ವಚನ ಬೋಧಿಸಿ, ವರ್ಷದುದ್ದಕ್ಕೂ ಒಳ್ಳೆಯ ಜನೋಪಯೋಗಿ ಕಾರ್ಯಕ್ರಮವನ್ನು ಆಯೋಜಿಸುವಂತೆ ನುಡಿದರು. ವಲಯ 15ರ ಉಪಾಧ್ಯಕ್ಷ ಜಿತೇಶ್ ಪಿರೇರಾ ನೂತನ ತಂಡಕ್ಕೆ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ 2025ರ ಘಟಕಾಧ್ಯಕ್ಷ ನಟೇಶ್ ಪೂಜಾರಿ 2025ರ ವಾರ್ಷಿಕ ವರದಿಯನ್ನು ಓದಿದರು. ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ಕಾರ್ಯದರ್ಶಿ ಶ್ರೀ ಗಣೇಶ್ ಪಿ. ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಉಪ್ಪಿನಂಗಡಿ ಜೆಸಿಐ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
*ಜೆಸಿಐ ಉಪ್ಪಿನಂಗಡಿ ಘಟಕದ 48ನೇ ವರ್ಷದ ಘಟಕಾಡಳಿತ ಮಂಡಳಿಯ ಪದಪ್ರದಾನ ಸಮಾರಂಭ*
Newspad
0
Premium By
Raushan Design With
Shroff Templates
إرسال تعليق