ಸುಬ್ರಹ್ಮಣ್ಯ ಡಿಸೆಂಬರ್ 19 : ಸುಬ್ರಮಣ್ಯ ಸಮೀಪದ ಕುಲ್ಕುಂದ ಶ್ರೀ ಬಸವೇಶ್ವರ ದೇವಾಲಯದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತನ್ನ ಎರಡು ಕಾಲುಗಳ ಬಲವನ್ನ ಕಳೆದುಕೊಂಡು ನಡೆದಾಡಲು ಕಷ್ಟ ಪಡುತ್ತಿದ್ದ ಕುಲಕುಂದ ಕಾಲೋನಿಯ ಗಿರಿಜಾ ಎಂಬ ಮಹಿಳೆಗೆ ಕುಲುಕುಂದ ಕಾಲೋನಿ ಸಮೀಪ ಅವರ ನಿವಾಸಕ್ಕೆ ಹೋಗಿ ವೀಲ್ ಚಯರ್ ಅನ್ನು ಗುರುವಾರ ಸುಬ್ರಮಣ್ಯ ರೋಟರಿ ಕ್ಲಬ್ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಗಿರಿಧರ ಸ್ಕಂದ, ಕಾರ್ಯದರ್ಶಿ ವಿಜಯಕುಮಾರ ನಡುತೋಟ, ಕೋಶಾಧಿಕಾರಿ ರವೀಂದ್ರ ಕುಮಾರ ರುದ್ರಪಾದ,ನಿರ್ದೇಶಕ ಶಿವರಾಮ್ ಗೌಡ ಪಳ್ಳಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷ ರುಗಳಾದ ಗೋಪಾಲ ಎಣ್ಣೆಮಜಲ್, ಸೀತಾರಾಮ ಎಣ್ಣೆ ಮಜಲ್ ವಿಜಯಕುಮಾರ ಅಮೈ ಮುಂತಾದವರು ಉಪಸ್ಥಿತರಿದ್ದರು.
Post a Comment