ಕುಕ್ಕೆ ಸುಬ್ರಹ್ಮಣ್ಯ, ಡಿ.31: ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು 2026ರ ಹೊಸ ವರುಷ ಸ್ವಾಗತಕ್ಕೆ ಅದ್ದೂರಿಯಾಗಿ ಸಿಂಗಾರಗೊಂಡಿದೆ. ಮದುವಣಗಿತ್ತಿಯಂತೆ ಮೆರಗು ಮೂಡಿಸಿರುವ ದೇವಸ್ಥಾನ ಆವರಣ ಎಲ್ಲೆಡೆ ಹೊಸ ವರ್ಷದ ಸಂಭ್ರಮದ ಕಳೆ ತುಂಬಿಕೊಂಡಿದೆ.
ದೇವಸ್ಥಾನದ ಮಹಾಗೋಪುರ ಮುಂಭಾಗದಲ್ಲಿ ವಿಶೇಷ ಕಲಾಕೃತಿಗಳಿಂದ ಅಲಂಕರಿಸಿದ ಚಪ್ಪರ–ತೋರಣಗಳು, ಬಣ್ಣಬಣ್ಣದ ಹೂವಿನ ಅಲಂಕಾರಗಳು, ವಿದ್ಯುತ್ಕಂಗಳ ಬೆಳಕಿನ ಝಳಪೊಂದಿಗೆ ಕ್ಷೇತ್ರದ ವಾತಾವರಣ ದೈವಿಕ ಛಾಯೆ ತುಂಬಿಕೊಂಡಿದೆ. ಭಕ್ತರು ಹೊಸ ವರ್ಷದ ಪ್ರಯುಕ್ತ ದೇವರ ದರ್ಶನಕ್ಕಾಗಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಕ್ಷೇತ್ರ ತಲುಪತೊಡಗಿದ್ದಾರೆ.
ಈ ಶುಭ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ನಾಡಿನ ಸಮಸ್ತ ಜನತೆಗೆ 2026 ಹೊಸ ವರ್ಷದ ಹಾರೈಕೆ ಸಲ್ಲಿಸಿ ಮಾತನಾಡಿದರು.
“ನಾಡಿನ ಎಲ್ಲರಿಗೂ 2026ರಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ಕೃಪೆ ಸದಾ ಇರಲಿ. ಪ್ರತಿಯೊಬ್ಬರಿಗೂ ಆರೋಗ್ಯ, ದೀರ್ಘಾಯುಷ್ಯ, ಮನೆಯಲ್ಲಿ ಸುಖ–ಶಾಂತಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ ಹಾಗೂ ಆರ್ಥಿಕ ಸಮೃದ್ಧಿ ಸಿಗಲಿ. ಎಲ್ಲರ ಜೀವನದಲ್ಲಿ ಶುಭವಾಗಲಿ” ಎಂದು ಅವರು ಶುಭಾಶಯ ಕೋರಿದರು.
Post a Comment