ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ವಂದನೀಯ ಗುರುಗಳು ಡಾ. ವರ್ಗಿಸ್ ಕೈಪನಡ್ಕರವರ ಗುರುದೀಕ್ಷೆಯ ಬೆಳ್ಳಿ ಹಬ್ಬ ಡಿಸೆಂಬರ್ 30ರಂದು ಇಚಲಂಪಾಡಿಯ ಸಂತ ತೋಮಸ್ ಮಲಂಕರ ಸೀರಿಯನ್ ಕ್ಯಾಥೋಲಿಕ್ ಚರ್ಚ್ನಲ್ಲಿ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಗೀ ವರ್ಗಿಸ್ ಮಾರ್ ಮಕಾರಿಯೋಸ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಪ್ರಾರ್ಥನೆಗಳೊಂದಿಗೆ ನಡೆಯಿತು,
ಬೆಥನಿ ಆಶ್ರಮದ ಸೂಪರ್ ವೈಸರ್ ಡಾ. ಜಿ. ವರ್ಗಿಸ್ ಕುಟ್ಟಿಲ್, ಬೆಥನಿ ನವಜ್ಯೋತಿ ಪ್ರಾವಿಯೆಂನ್ಸ್ ಸೂಪರ್ ವೈಸರ್ ಜಾರ್ಜ್ ಐಯನೆತ್, ,ಡಾ. ಕ್ರಿಷ್ಟೋಫರ್, ಅಂಟನಿ ಪದಪುರಂಕಲ್, ಫಾ. ಸತ್ಯಂ ತೋಮಸ್, ಫಾ. ಹನಿ, ಫಾ. ಜಾನ್ ಕುನ್ನತೆತು,ಬಾಲ ಕೃಷ್ಣ ಬಾಣಜಾಲ್, ಪಿ. ಪಿ. ವರ್ಗಿಸ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಅಂಟನಿ ಪದಿಪುರಕ್ಕಲ್ ಸ್ವಾಗತಿಸಿ, ಸರಿತಾ ಕೈಪನಡ್ಕ ಧನ್ಯವಾದ ಸಮರ್ಪಿಸಿದರು.
ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ, ಬೆಥನಿ ವಿದ್ಯಾ ಸಂಸ್ಥೆ ನೂಜಿ ಬಾಲ್ತಿಲ,ಬೆಥನಿ ಐ.ಟಿ.ಐ ನೆಲ್ಯಾಡಿ, ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ, ಕೌಕ್ರಾಡಿ ಗ್ರಾಮ ಪಂಚಾಯತ್,ಪಿ.ಟಿ.ಎ ಸದಸ್ಯರು ಬೆಥನಿ ವಿದ್ಯಾ ಸಂಸ್ಥೆ ನೆಲ್ಯಾಡಿ,ಸಂತ ತೋಮಸ್ ಮಲಂಕರ ಚರ್ಚ್ ಇಚಲಂಪಾಡಿ,ಸಂತ ಮೇರಿ ಮಲಂಕರ ಚರ್ಚ್ ಅಡ್ಡೋಲೆ,ಸಂತ ಜೋನ್ ಮಲಂಕರ ಚರ್ಚ್ ಶಿರಾಡಿ, ಅಲ್ಫೋನ್ಸೋ ಚರ್ಚ್ ನೆಲ್ಯಾಡಿ ಅಲ್ಲದೆ ಇನ್ನಿತರ ಚರ್ಚ್ ಗಳು ಮತ್ತು ಸಂಘ ಸಂಸ್ಥೆ ಗಳು,ಅಭಿಮಾನಿ ಗಳು, ಕುಟುಂಬಿಕರು, ಬಂಧುಗಳು ಅಭಿನಂದಿಸಿ ಸನ್ಮಾನಿಸಿದರು.
Post a Comment