ಕುಕ್ಕೆ ಸುಬ್ರಹ್ಮಣ್ಯ: ಅಧ್ಯಕ್ಷ ಹರೀಶ್ ಇಂಜಾಡಿ ಮನೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಕಾರ್ತಿಕ್‌ಗೆ ಸನ್ಮಾನ.

ಕುಕ್ಕೆ ಸುಬ್ರಹ್ಮಣ್ಯ: ದಕ್ಷ ಪೊಲೀಸ್ ಅಧಿಕಾರಿ ಕಾರ್ತಿಕ್ ಅವರಿಗೆ ಗೌರವ ಸಮರ್ಪಣೆ
ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಹಾಗೂ ಠಾಣಾಧಿಕಾರಿಯಾಗಿ ಸುಮಾರು ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಕಾರ್ತಿಕ್ ಅವರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರಿಂದ ವಿಶೇಷ ಗೌರವ ಅರ್ಪಿಸಲಾಯಿತು.
ಇಂಜಾಡಿ ಅವರ ನಿವಾಸದಲ್ಲಿ ಸರಳವಾಗಿ ಆಯೋಜಿಸಲಾದ ಗೌರವ ಸಮಾರಂಭದಲ್ಲಿ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿದ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ತಿಕ್ ಅವರು ಜನಸಾಮಾನ್ಯರ ಮನೆಗೆದ್ದಿದ್ದು, ನ್ಯಾಯ ಒದಗಿಸುವಲ್ಲಿ ತೋರಿದ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಾಗೂ ಕಾನೂನು ಜಾರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅಧಿಕಾರಿಯಾಗಿ ಕಾರ್ತಿಕ್ ಅವರು ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಗೌರವ ಸಮಾರಂಭದ ಸಂದರ್ಭದಲ್ಲಿ ಹರೀಶ್ ಇಂಜಾಡಿ ಅವರ ಪತ್ನಿ ಶ್ರೀಮತಿ ಚೇತನ ಹರೀಶ್, ಇಂಜಾಡಿ ಅವರ ತಂದೆ ನಿವೃತ್ತ ಶಿಕ್ಷಕ ಪುಂಗವ ಗೌಡ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಸೌಮ್ಯ ಭರತ್, ಅಜಿತ್ ಪಾಲೇರಿ, ಸದಸ್ಯೆ ಶ್ರೀಮತಿ ಪ್ರವೀಣಾ ರೈ ಹಾಗೂ ಸ್ಥಳೀಯರಾದ ಭರತ್, ಕೃಷಿಕ ಅಶೋಕ್ ಕುಜುಗೋಡು,ಹಾಗೂ ಚಂದ್ರಹಾಸ ಉಪಸ್ಥಿತರಿದ್ದರು.
ಒಬ್ಬ ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಗೌರವಿಸಿರುವುದು ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವಂತಹ ವಿಶೇಷ ಸಂದರ್ಭವಾಗಿತ್ತು.

Post a Comment

Previous Post Next Post