ಪಂಜದಲ್ಲಿ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭ.

ಸುಬ್ರಹ್ಮಣ್ಯ ಜನವರಿ 23: ಪಂಜದ ನಾಯರ್ಕೆರೆ ಸಿರಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಅಭಿಷೇಕ್ ನಡುತೋಟ ಮಾಲಕತ್ವದ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ಸ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭಗೊಂಡಿತು.
 ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡು ತೋಟ ಸೇವಾ ಕೇಂದ್ರವನ್ನ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ದಿವಾಕರ ನಡುತೋಟ,ಕಾರ್ತಿಕ್ ನಡುತೋಟ, ಹೇಮ ವಸಂತ ಚಿದ್ಗಲ್, ಶ್ರೀಮತಿ ಶಾಂತಿ ನೀಲಪ್ಪಗೌಡ  ನಡು ತೋಟ, ಶ್ರೀಮತಿ ಲೀಲಾಕುಮಾರಿ ವಿಶ್ವನಾಥ ನಡುತೋಟ, ಅನಿತಾ ಗಿರಿಧರ ನಡುತೋಟ ಗೀತಾ ವಿಜಯಕುಮಾರ ನಡುತೋಟ , ಗಿರಿಧರ ನಡು ತೋಟ, ಸಿರಿಕಾಂಪ್ಲೆಕ್ಸ್ ಸಿಬ್ಬಂದಿ ವರ್ಗದವರು ಸ್ನೇಹಿತರು ಉಪಸ್ಥಿತರಿದ್ದರು.
 ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ನಿವೃತ್ತ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಧನ್ಯವಾದ ಸಮರ್ಪಿಸಿದರು.

Post a Comment

Previous Post Next Post